ಎಂಆರ್ ಎಫ್ ಡರ್ಟ ಟ್ರ್ಯಾಕ್ ಚಾಂಪಿಯನ್ ಶಿಪ್,ಧಾರವಾಡದಲ್ಲಿ ಬೈಕ್ ರೈಡಿಂಗ್ ಸ್ಪರ್ಧೆ 27ರಂದು

IMG_20230825_114721_375-2.jpg
Published on

ಹುಬ್ಬಳ್ಳಿ: ಗಾಡಸ್ಪೀಡ್ ಸಂಘಟನೆ ವತಿಯಿಂದ ಎಂಆರ್ ಎಫ್ ಡರ್ಟ ಟ್ರ್ಯಾಕ್ ಎಫ್ಎಂಎಸ್ಸಿಐ ನ್ಯಾಷನಲ್ ಚಾಂಪಿಯನ್ ಶಿಪ್ "ಬೈಕ್ ರೈಡಿಂಗ್' ಸ್ಪರ್ಧೆಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಆ. 27ರಂದು ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಶ್ಯಾಮ್ ಕೊಠಾರಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಏರ್ಪಡಿಸಿರುವ ಮೂರನೇ ಸುತ್ತಿನ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅಂದು ಬೆಳಗ್ಗೆ 9.30ಕ್ಕೆ ಸಚಿವ ಸಂತೋಷ ಲಾಡ್ ಅವರು ಚಾಲನೆ ನೀಡುವರು ಎಂದರು.

ಒಟ್ಟು ಐದು ಸುತ್ತುಗಳಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ನಡೆಯಲಿದೆ. ಈಗಾಗಲೇ ಎರಡು ಸುತ್ತುಗಳು ದೇಶದ ವಿವಿಧ ಕಡೆಗಳಲ್ಲಿ ನಡೆದಿವೆ. ಬೈಕ್ ರೈಡರ್ಸ್ ಹಾಗೂ ಇದರಲ್ಲಿ ಆಸಕ್ತಿ ಇರುವವರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಿ ಕೊಡುವ ಉದ್ದೇಶದಿಂದ ಧಾರವಾಡದಲ್ಲಿ ಮೂರನೇ ಸುತ್ತಿನ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಇಲ್ಲಿ ರೈಡರ್ ಗಳು ತಮ್ಮ ಚಾಕಚಕ್ಯತೆ, ಕೌಶಲ ಪ್ರದರ್ಶನ ಮಾಡಬಹುದು. 10 ವಿವಿಧ ವಿಭಾಗಗಳಲ್ಲಿ ಬೈಕ್ ರೈಡಿಂಗ್ ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರು ಸಹ ಪಾಲ್ಗೊಳ್ಳಬಹುದಾಗಿದೆ. ಧಾರವಾಡದಲ್ಲಿ ಬೈಕ್ ರೇಸಿಂಗ್ ಗೆ ಉತ್ತಮ ವಾತಾವರಣ ಇದೆ. ದೇಶದ ವಿವಿಧ ಭಾಗಗಳಿಂದ ಈಗಾಗಲೇ 90ಕ್ಕೂ ಹೆಚ್ಚು ಜನರು ಹೆಸರು ನೋಂದಣಿ ಮಾಡಿಕೊಂಡಿದ್ದು, ಇನ್ನಷ್ಟು ಜನರು ಬರುವ ನಿರೀಕ್ಷೆ ಇದೆ ಎಂದರು.

ಸಂಘಟಕರಾದ ವಿಜಯ ದಂಡಗಿ, ಅಶುತೋಷ ಕಾಳೆ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net