ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೀಗಳು

Mr. who worked hard for social welfare
ಸಿಂದಗಿಯ ಹಿರೇಮಠದಲ್ಲಿ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಸ್ಮರಣೋತ್ಸವಕ್ಕೆ ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಚಾಲನೆ ನೀಡಿದರು.
Published on

ಸಿಂದಗಿ: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ತಮ್ಮ ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣವನ್ನೂ ಸಾಧಿಸಿದರು ಎಂದು ಡಂಬಳ&ಗದಗ ಎಡೆಯೂರ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ಊರನ ಹಿರೇಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಆರನೇ ಪುಣ್ಯಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ "ಉರಿಯ ಗದ್ದುಗೆ' ಗ್ರಂಥ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.

ಕನ್ನಡ ಆಡಳಿತ ಭಾಷೆಯಾಗಬೇಕು ಎಂಬ ಗೋಕಾಕ ಚಳವಳಿಯ ಧ್ವನಿ ಮೊಳಗಿದ್ದು ಸಿಂದಗಿ. ಅದರ ರೂವಾರಿಗಳು ತೋಂಟದ ಶ್ರೀಗಳೇ ಎಂದರು.

ಮಹಾದಾಯಿ, ಕಳಸಾ&ಬಂಡೂರಿ ಹೋರಾಟ, ಪರಿಸರ ಪ್ರೀತಿ ಹೊಂದಿದ್ದ ಶ್ರೀಗಳು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ತಡೆಯಲು ಹೋರಾಟ ನಡೆಸಿದ್ದಾರೆ. ಲಿಂಗಾಯತ ಅಧ್ಯಯನ ಸಂಸ್ಥೆ ಮುಖಾಂತರ 600 ಕೃತಿ ಪ್ರಕಟಿಸಿ ಕನ್ನಡದ ಜಗದ್ಗುರು ಎಂಬ ಖ್ಯಾತಿ ಪಡೆದರು ಎಂದರು.

ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು, ಡಾ.ಗುರುಮಹಾಂತೇಶ ಶಿವಾಚಾರ್ಯರು, ಬಿ.ಆರ್​.ಪೊಲೀಸ ಪಾಟೀಲ, ಎಂ.ಡಿ.ಬಳಗಾನೂರ, ಎಂಎಲ್ಸಿ ಅರುಣ ಶಹಾಪೂರ ಶ್ರೀಗಳ ಬದುಕು, ನಿಲುವು ಮತ್ತು ಒಲವುಗಳ ಚಿತ್ರಣಗಳನ್ನು ತೆರೆದಿಟ್ಟರು.

ವೇದಿಕೆಯಲ್ಲಿ ಅಭಿನವ ರುದ್ರಮುನಿ ಶ್ರೀಗಳು, ಬಸವಲಿಂಗ ಸ್ವಾಮೀಜಿ, ರೇವಣಸಿದ್ದ ಶ್ರೀ, ಮಡಿವಾಳೇಶ್ವರ ಸ್ವಾಮೀಜಿ, ಕೆಂಚಬಸವ ಶಿವಾಚಾರ್ಯರು, ಶಿವಬಸವ ಶಿವಾಚಾರ್ಯರು, ಶಿವಪ್ರಸಾದ ದೇವರು, ಸಂಗನಬಸವ ಸ್ವಾಮೀಜಿ, ಶಿವಾನಂದ ಶಿವಾಚಾರ್ಯರು, ಶಿವಪ್ಪಗೌಡ ಬಿರಾದಾರ, ಡಾ.ಅರವಿಂದ ಮನಗೂಳಿ ಮತ್ತಿತರರಿದ್ದರು.

ಅಶೋಕ ಅಲ್ಲಾಪೂರ, ಅನೀಲಗೌಡ ಬಿರಾದಾರ, ಡಾ.ಮಹಾಂತೇಶ ಹಿರೇಮಠ, ಎಂ.ಎಸ್​.ಹಯ್ಯಾಳಕರ, ಪ್ರೊ.ಶಾಂತು ಹಿರೇಮಠ, ಅಶೋಕಗೌಡ ದೇವರಮನಿ, ಚಂದ್ರಾಮ ಕುಂಬಾರ, ಅಶೋಕ ಕುಲಕರ್ಣಿ, ಎಂ.ಎಂ.ಮುಂಡೇವಾಡಗಿ ಇದ್ದರು.

ಉಪನ್ಯಾಸಕ ಶಾಂತೇಶ ದುರ್ಗಿ ಸ್ವಾಗತಿಸಿದರು. ಶಿಕ ಜಗದೀಶ ಪಾಟೀಲ ಹಾಗೂ ಪೂಜಾ ಹಿರೇಮಠ ನಿರೂಪಿಸಿದರು. ಡಾ.ಪ್ರಕಾಶ ಮೂಡಲಗಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net