ದಿ.ವಿಶ್ವನಾಥ್ ಸರಳ, ಸಜ್ಜನ ವ್ಯಕ್ತಿ: ಆರಗ ಜ್ಞಾನೇಂದ್ರ

Araga Jnanendra
Published on

ತೀರ್ಥಹಳ್ಳಿ: ತಾಲೂಕಿನ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ ಸಹಕಾರ ಧುರೀಣ ಬಿ.ಎಸ್.ವಿಶ್ವನಾಥ್ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವ ಅನುಕರಣೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇತ್ತೀಚೆಗೆ ನಿಧನರಾದ ವಿಶ್ವ ಸಹಕಾರಿ ಬಿ.ಎಸ್.ವಿಶ್ವನಾಥ್ ಅವರ ನುಡಿನಮನ ಸಲ್ಲಿಕೆಗಾಗಿ ವಿವಿಧ ಸಂಘಟನೆಗಳಿAದ ಪಟ್ಟಣದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ವಿಶೇಷ ಮಾನ್ಯತೆ ತಂದು ಕೊಟ್ಟಿರುವ ಕೆಲವೇ ಮಂದಿ ಪ್ರಮುಖರಲ್ಲಿ ವಿಶ್ವನಾಥನ್ ಕೂಡ ಒಬ್ಬರು. ಅತಿ ಸಾಮಾನ್ಯರನ್ನೂ ಗುರುತಿಸಿ ಗೌರವಿಸುವ ಹೃದಯವಂತಿಕೆ ಹೊಂದಿದ್ದ ಅವರ ವಿಶಿಷ್ಟ ವ್ಯಕ್ತಿತ್ವ ಎಂದಿಗೂ ಮರೆಯಲಾಗದು ಎಂದರು.
ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ್ ಜವಳಿ ಮಾತನಾಡಿ, ಬೆಂಗಳೂರಿನಲ್ಲಿ ನೆಲೆಸಿ ವಿಶ್ವ ಮಟ್ಟಕ್ಕೆ ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿದ್ದ ದಿವಂಗತರು ತನ್ನೂರಿನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಊರಿನ ಸಾಧಕರನ್ನು ಗುರುತಿಸಿ ಗೌರವಿಸುವ ಮತ್ತು ಅಸ್ಮಿತೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು ಎಂದರು.
ಚಿAತಕ ಕಡಿದಾಳು ದಯಾನಂದ್,ಪಪA ಅಧ್ಯಕ್ಷೆ ಗೀತಾ ರಮೇಶ್, ಸಜನಿ ಡಿ ಗೌಡ, ಕೆಸ್ತೂರು ಮಂಜುನಾಥ್, ಕಡ್ತೂರು ದಿನೇಶ್, ಕೆ.ನಾಗರಾಜ ಶೆಟ್ಟಿ, ಮೋಹನ್ ಮುನ್ನೂರು, ಜೆ.ಟಿ.ಸುಂದರೇಶ್, ಎಸ್.ವಿ.ಲೋಕೇಶ್, ಹಾಲಿಗೆ ನಾಗರಾಜ್, ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net