ಸಮನ್ವಯತೆಯ ಸೂತ್ರ ಪಾಲಿಸಿದ್ದ ತೋಂಟದ ಶ್ರೀ

Mr. Tonda followed the formula of coordination
ವಿಜಯಪುರದ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಆರನೇ ಪುಣ್ಯ ಸ್ಮರಣೋತ್ಸವದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು. ಪ್ರಮೋದಕುಮಾರ ಮಠಪತಿ, ಡಾ. ಸುರೇಖಾ ರಾಠೋಡ ಮತ್ತಿತರರಿದ್ದಾರೆ.
Published on

ವಿಜಯಪುರ: ತೋಂಟದ ಶ್ರೀಗಳು ಕನ್ನಡದ ಕುಲ ಗುರುಗಳು. ಕೋಮು ಸೌಹಾರ್ದತೆಯ ಹರಿಕಾರರು. ತೃತೀಯ ಅಲ್ಲಮ ಪ್ರಭುಗಳೆಂದು ಖ್ಯಾತರಾಗಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಆರನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ವಧರ್ಮ ಸಮನ್ವಯತೆಯ ಸೂತ್ರ ಅಳವಡಿಸಿಕೊಂಡಿದ್ದ ತೋಂಟದ ಶ್ರೀಗಳು ದೇಶದಲ್ಲಿ ಸಹೋದರತೆಯ ಪವಿತ್ರ ಬಾಂಧವ್ಯ ಬೆಸೆಯುವ ಕಾಯಕದಲ್ಲಿ ತೊಡಗಿಸಿಕೊಡು ಮಾನವೀಯತೆ ಮೌಲ್ಯಕ್ಕೆ ಮೆರಗು ನೀಡಿದ್ದರು ಎಂದರು.

ಬಂಜಾರ ಸಂಸತಿ ಮತ್ತು ಭಾಷಾ ಆಕಾಡೆಮಿ ಸದಸ್ಯೆ ಡಾ. ಸುರೇಖಾ ರಾಠೋಡ ಮಾತನಾಡಿ, ತೋಂಟದ ಸಿದ್ಧಲಿಂಗ ಸ್ವಾಮೀಜಿ ಜನ್ಮ ದಿನವನ್ನು ಭಾವೈಕ್ಯತೆಯ ದಿನಾಚರಣೆಯಾಗಿ ಆಚರಿಸುತ್ತಿರುವುದು ಅತ್ಯಂತ ಶ್ಲಾನೀಯ. ಸಮಾಜದಲ್ಲಿ ಅಶಾಂತಿ ಹಾಗೂ ವೈಮನಸ್ಸು ಮೂಡಿಸುವುದನ್ನು ನಿಲ್ಲಿಸಿದ ಕೀರ್ತಿ ತೋಂಟದ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಡೈಯಟ್​ ಕಾಲೇಜಿನ ಉಪನ್ಯಾಸಕ ಪ್ರಮೋದಕುಮಾರ ಮಠಪತಿ ಮಾತನಾಡಿದರು. ಗೌರವ ಕಾರ್ಯದರ್ಶಿ ಸುರೇಶ ಜತ್ತಿ, ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ. ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಈಶ್ವರ ಪೂಜಾರಿ, ಅಣ್ಣುಗೌಡ ಸಾವಳಗಿ, ಬಿಂದುರಾವ ನಾಡಗೌಡ, ಪರಗೊಂಡ ಬಿರಾದಾರ, ಮಹಾದೇವ ವಾಲಿಕಾರ, ಈರಣ್ಣ ಮಾಮನೆ, ಶಿವಾಜಿ ಮೊರೆ, ಎಂ.ಎಸ್​. ತಿಗಣಿಬಿದರಿ, ಗಂಗಮ್ಮ ರಡ್ಡಿ, ಲಕ್ಷಿ$್ಮ ಬಿರಾದಾರ,ರಾಹುಲ ಚವ್ವಾಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net