ಎಂ.ಆರ್. ಸಾಕ್ರೆ ಆಂಗ್ಲ ಮಾಧ್ಯಮ ಶಾಲೆ ಪ್ರಥಮ

H:2023-2024 DOC MARCHLETTERS
Published on

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಹೋದಯ ಸಂಸ್ಥೆ ಹಾಗೂ ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ ಸಹಯೋಗದಲ್ಲಿ ನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ 17 ವರ್ಷದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಕೆಎಲ್‌ಇ ಸಂಸ್ಥೆಯ ಎಂ.ಆರ್. ಸಾಕ್ರೆ ಆಂಗ್ಲ ಮಾಧ್ಯಮ ಶಾಲೆ (ಪ್ರಥಮ), ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆ (ದ್ವಿತೀಯ)ಗೆ ಬಹುಮಾನ ವಿತರಿಸಲಾಯಿತು. 11ಕ್ಕೂ ಹೆಚ್ಚು ಶಾಲಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್.ವಿ. ಬೆಳಗಲಿ, ಎಸ್.ಆರ್. ಬೊಮ್ಮಾಯಿ ಶಾಲೆಯ ಪ್ರಾಚಾರ್ಯೆ ರೇಖಾ ತುಪ್ಪದ, ಶಾಲೆ ಉಪಾಧ್ಯಕ್ಷ ಕಿರಣಕೋಸಗಿ, ಪ್ರಾಚಾರ್ಯೆ ರೂಪಾ ವಾಲಿ, ಸಲಹಾ ಸಮಿತಿ ಸದಸ್ಯ ಡೋಲಾ ದೇವಪ್ರಸಾದ, ಮೊಹಮ್ಮದ್ ಜಾಫರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net