ಮುತ್ತಗಿಯಲ್ಲಿ ಲಿಂ.ರುದ್ರಮುನಿ ಶ್ರೀಗಳ ಜಾತ್ರೆ

Mr. Rudramuni's fair at Muttagi
ರುದ್ರಮುನಿ ಶಿವಾಚಾರ್ಯರು
Published on

ಗೊಳಸಂಗಿ: ಸಮೀಪದ ಮುತ್ತಗಿ ಗ್ರಾಮದ ಸಂಸ್ಥಾನ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ 86 ನೇ ಪುಣ್ಯಾರಾಧನೆ ಮತ್ತು ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಜಾನುವಾರುಗಳ ಜಾತ್ರೆ ಆರಂಭಗೊಳಿಸುವ ಮೂಲಕ ಚಾಲನೆ ನೀಡಲಾಯಿತು.

ಮಂಗಳವಾರ ಬೆಳಗ್ಗೆ ಶ್ರೀಮಠಕ್ಕೆ ಕಲಶಾರೋಹಣದ ಬಳಿಕ ಜಾನುವಾರುಗಳ ಜಾತ್ರೆಗೆ ಚಾಲನೆ ನೀಡಲಾಯಿತು.

ಸಂಜೆ ಶ್ರೀಮಠದ ಆವರಣದಲ್ಲಿ ಸಮಾಜದಲ್ಲಿ ಯುವಕರ ಪಾತ್ರ ಕುರಿತು ಶಿಕ ದೇವೇಂದ್ರ ಗೋನಾಳ ಅವರಿಂದ ಉಪನ್ಯಾಸ, ಗಣ್ಯರ ಸನ್ಮಾನ ಜರುಗಿತು. ಏ.17 ರಂದು ಸಂಜೆ ವಿವಿಧ ೇತ್ರದ ಸಾಧಕರ ಸನ್ಮಾನ ಕಾರ್ಯಕ್ರಮ ಇರುವುದು.

ಏ.19 ರಂದು ಬೆಳಿಗ್ಗೆ 10 ಗಂಟೆಗೆ ಏ.9 ರಿಂದ ಝಂಜರವಾಡದ ಬಸವರಾಜೇಂದ್ರ ಶರಣರಿಂದ ನಡೆಯುತ್ತ ಬಂದಿದ್ದ ಕಡಕೋಳ ಮಡಿವಾಳೇಶ್ವರ ಪುರಾಣ ಮಂಗಲ, 11 ಗಂಟೆಗೆ ಹಲವಾರು ಮಠಾಧೀಶರ ಸಮ್ಮುಖದಲ್ಲಿ ಧರ್ಮಸಭೆ, ಮಧ್ಯಾಹ್ನ 12 ಗಂಟೆಗೆ ಉಚಿತ ಸಾಮೂಹಿಕ ವಿವಾಹ, 1 ಗಂಟೆಗೆ ಮಹಾಪ್ರಸಾದ, ಸಂಜೆ 5.30 ಗಂಟೆಗೆ ಭರತನಾಟ್ಯ, ಗಾಯನಸ್ಪರ್ಧೆ, ಜಾನುವಾರುಗಳ ಜಾತ್ರೆಯಲ್ಲಿ ಉತ್ತಮವಾದ ರಾಸುಗಳಿಗೆ ಏ.20 ರಂದು ಸಂಜೆ 4 ಗಂಟೆಗೆ ವಿಜಯಪುರ ಎಪಿಎಂಸಿಯವರಿಂದ ಬಹುಮಾನ ವಿತರಣೆ ಕಾರ್ಯಕ್ರಮ ಇರುವುದೆಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net