ಕರೊನಾದಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳ ಜತೆ ದೀಪಾವಳಿ, ಜತೆಯಾಗಿ ಊಟವನ್ನು ಸವಿದ ಸಂಸದರು

IMG_20251022_224229.jpg
Published on

ಚಿಕ್ಕಬಳ್ಳಾಪುರ:  ಕರೊನಾದಿಂದ ತಂದೆ ತಾಯಂದಿರು ಕಳೆದುಕೊಂಡ ಮಕ್ಕಳೊಂದಿಗೆ ಮನೆಯಲ್ಲಿ ಸಂಸದ ಡಾ ಕೆ.ಸುಧಾಕರ್ ದೀಪಾವಳಿ ಹಬ್ಬವನ್ನು ಆಚರಿಸಿದರು. ಜತೆಯಲ್ಲಿ ಹಬ್ಬದ ಭೋಜನವನ್ನೂ ಸವಿದರು.  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,
ಕಗ್ಗತ್ತಲನ್ನು ಓಡಿಸಿ ಬೆಳಕು ತರುವ ಸಂದೇಶಾತ್ಮಕ ದೀಪಾವಳಿಯು ಇಡೀ ಕುಟುಂಬಕ್ಕೆ ಸಡಗರ ಹಾಗೂ ಸಂಭ್ರಮದ ಹಬ್ಬ. ಇದನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದರ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

*ದತ್ತು ಸ್ವೀಕಾರ  
ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ಮೂಲಕ ಸಂಸದರು ಕರೊನಾದಿಂದ ತಂದೆ ತಾಯಂದಿರನ್ನು ಕಳೆದುಕೊಂಡಿದ್ದ ೧೦ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಇವರ ಹೆಸರಿನಲ್ಲಿ ತಲಾ ೧ ಲಕ್ಷ ರೂ ಠೇವಣಿಯಿಟ್ಟು ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಅನೇಕರು ಬಲಿಯಾಗಿದ್ದು ಇಂತಹವರ ಕುಟುಂಬಗಳಿಗೆ ಆಸರೆಯಾಗಿದೆ. ಚೇತರಿಸಿಕೊಂಡು ಎಂದಿನಂತೆ ನೆಮ್ಮದಿಯ ಜೀವನ ನಡೆಸುವ ನಿಟ್ಟಿನಲ್ಲಿ ನೆರವಾಗಬೇಕಾಗಿದೆ ಎಂದು ಸಂಸದರು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net