ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ಪೂರ್ಣಗೊಳಿಸಿ; ಜಗದೀಶ ಶೆಟ್ಟರ್ ಸೂಚನೆ

IMG-20251009-WA0169.jpg
Published on

ಬೆಳಗಾವಿ: ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಅಭಿವೃದ್ಧಿ ಪ್ರಾಧಿಕಾರ, ವಿಮಾನಯಾನ ಇಲಾಖೆ, ಕೆ ಎ ಐ ಡಿ ಬಿ ಇಲಾಖೆ, ಕೈಕೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳ ಅನುಷ್ಠಾನ ಬಗ್ಗೆ ಪ್ರಗತಿ ವಿವರವನ್ನು ಸಂಸದ ಜಗದೀಶ ಶೆಟ್ಟರ್ ಪಡೆದುಕೊಂಡರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, :-

ಬೆಳಗಾವಿ (ಶೆಗಣಮಟ್ಟಿ - ಹುನಗುಂದ - ರಾಯಚೂರ ನೂತನ ಹೆದ್ದಾರಿ ನಿರ್ಮಣದ ಅಂಗವಾಗಿ ಪ್ಯಾಕೇಜ 1 ಮತ್ತು 2 ರಡಿ ನಡೆಸಬೇಕಾದ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಚರ್ಚಿಸಲಾಗಿ, ಈಗಾಗಲೆ ಶೇ 80 ಭೂಸ್ವಾಧೀನ ನಡೆಸಲಾದ ಬಗ್ಗೆ ತಿಳಿದುಬಂದಿತು. ಈ ಮೊದಲು ಇದ್ದ ಕೆಲವು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿರುವ ವಿಷಯವನ್ನು ಅಧಿಕಾರಿಗಳು ಸಂಸದರಿಗೆ ತಿಳಿಸಿದರು.

ಬೆಳಗಾವಿ ನಗರದ ಸುತ್ತಲೂ ರಿಂಗ್ / ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಗತಿಯನ್ನು ಅವಲೋಕಿಸಲಾಯಿತು. ಇದರ ಅನುಷ್ಠಾನದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ನಿವಾರಿಸುವ ಮತ್ತು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಬಗ್ಗೆ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ಸೂಚಿಸಲಾಯಿತು. ಅದರಂತೆ ಬೆಳಗಾವಿ ತಾಲೂಕಿನ ನಾವಗೆ ಮತ್ತು ಬೆಳಗುಂದಿ ಗ್ರಾಮದ ನಿವಾಸಿಗಳು ನೀಡಿದ ಜಮೀನಿಗೆ ಪರಿಹಾರಧನ ನಿಕ್ಕಿಲ್ಲವಾಗಿದ್ದು ಅದನ್ನು ಕೂಡಲೆ ವಿತರಿಸುವ ಬಗ್ಗೆ ಮುಂದಿನ ಕ್ರಮವನ್ನು ಕೈಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿಲಾಯಿತು.

ವಿಮಾನಯಾನ ಇಲಾಖೆ:

ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿಯ ಕುರಿತು ಬೆಳಗಾವಿ ವಾಯುಸೇನೆ ಇಲಾಖೆಯು ನೀಡಬೇಕಾದ ಭೂಮಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬರುವ ದಿನಗಳಲ್ಲಿ ಈ ಕುರಿತು ಸಹ ಒಂದು ಸೂಕ್ತ ಪರಿಹಾರ ಕಂಡುಕೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಲಾಯಿತು.

ಇಲ್ಲಿಯವರೆಗೆ ಮಳೆಗಾಲವಿದ್ದು ಈಗ ಅಂತ್ಯಗೊಂಡಿದೆ. ಬೈಪಾಸ ರಸ್ತೆ, ರಿಂಗ್ ರಸ್ತೆ ನಿರ್ಮಾಣ, ವಿಮಾನಯಾನ ಅಭಿವೃದ್ಧಿ ಹೀಗೆ ಎಲ್ಲ ಅಂಶಗಳ ಕುರಿತು ಹೆಚ್ಚಿನ ಮಹತ್ವವನ್ನು ಅಧಿಕಾರಿಗಳು ನೀಡಿ ಯಾವುದೇ ಅಡತಡೆ ಇಲ್ಲದೆ ಪ್ರಸ್ತಾಪಿತ ಕಾಮಗಾರಿಗಳನ್ನು ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸುವ ಬಗ್ಗೆ ಶ್ರಮವಹಿಸಲು ಬೆಳಗಾವಿ ಲೋಕಸಭಾ ಸದಸ್ಯರು ಶ್ರೀ ಜಗದೀಶ ಶೆಟ್ಟರ ಇವರು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಮಹಮ್ಮದ ರೋಷನ, ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ, ರಾಜಶ್ರೀ ಜೈನಾಪೂರ ಮತ್ತು ಶ್ರೀ ಚೌಹಾಣ, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಯೋಜನಾ ನಿರ್ದೇಶಕರಾದ, ಭೂವನೇಶ ಕುಮಾರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net