ಧಾರವಾಡ ಕೈಗಾರಿಕೆ ಪ್ರದೇಶ ಕ್ಕೆ ನೀರು ಕೊಡಲು ನನ್ನ ವಿರೋಧವಿದೆ: ಶೆಟ್ಟರ್‌

IMG-20250201-WA00331.jpg
Published on

ಬೆಳಗಾವಿ: ‘ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ–ಧಾರವಾಡದ ಕೈಗಾರಿಕೆಗಳಿಗೆ ನೀರು ಕೊಡುವುದಕ್ಕೆ ನನ್ನ ವಿರೋಧವಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಯೋಜನೆಗೆ ಪರ–ವಿರೋಧ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಜಲಾಶಯದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಿದ್ದರೆ, ಕೈಗಾರಿಕೆಗಳಿಗೆ ಕೊಡಲು ಅಭ್ಯಂತರವಿಲ್ಲ. ಆದರೆ, ನಮಗೆ ಕಡಿಮೆ ನೀರು ಲಭ್ಯ ಇರುವಾಗ ಬೇರೆಯವರಿಗೆ ಕೊಡುವುದನ್ನು ವಿರೋಧಿಸುತ್ತೇನೆ’ ಎಂದರು.

‘ಹಿಡಕಲ್‌ನಿಂದ ಹು–ಧಾ ಕೈಗಾರಿಕೆಗಳಿಗೆ ಯಾವ ಹಿನ್ನೆಲೆಯಲ್ಲಿ ನೀರು ಕೊಡಲಾಗುತ್ತಿದೆ, ಎಷ್ಟು ನೀರು ಕೊಡಲಾಗುತ್ತಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸ್ಪಷ್ಟೀಕರಣ ಕೊಡಬೇಕು. ಅವರು ಸ್ಪಷ್ಟೀಕರಣ ನೀಡದ್ದಕ್ಕೆ ಜನರಲ್ಲಿ ಗೊಂದಲ ಉಂಟಾಗಿದೆ’ ಎಂದು ಹೇಳಿದರು.

‘ಹಿಡಕಲ್‌ ಜಲಾಶಯದ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ, ಜಿಲ್ಲೆಯ ಹೆಚ್ಚಿನ ಜನಪ್ರತಿನಿಧಿಗಳೂ ಮಾತನಾಡುತ್ತಿಲ್ಲ. ನಾನು ಬೆಳಗಾವಿ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ಬೆಳಗಾವಿ ಹಿತಾಸಕ್ತಿ ಕಾಪಾಡುತ್ತೇನೆ. ನಾವು ತೊಂದರೆಗೆ ಸಿಲುಕಿ, ಬೇರೆಯವರಿಗೆ ನೀರು ಕೊಡಲು ಬಿಡುವುದಿಲ್ಲ. ಇದು ನನ್ನ ಸ್ಪಷ್ಟ ನಿಲುವು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಯೋಜನೆ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಪತ್ರವೇನಾದರೂ ಬರೆಯುತ್ತೀರಾ’ ಎಂ ಪ್ರಶ್ನೆಗೆ, ‘ಹಿಡಕಲ್ ಜಲಾಶಯದಿಂದ ಕೈಗಾರಿಕೆಗಳಿಗೆ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಜತೆಗೆ ಸಮಾಲೋಚನೆ ಮಾಡುತ್ತೇನೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net