ಎಂಪಿಎಂ ವಿನಾಯಕ

19bdvt2 (1) (1)
ಭದ್ರಾವತಿ ಕಾಗದನಗರದ ಕನ್ನಡ ಯುವಕರ ಸಂಘದಿಂದ ಪ್ರತಿಷ್ಠಾಪಿಸಿರುವ ಗಣಪ.
Published on

ಭದ್ರಾವತಿ: ಕಾಗದನಗರದ ಎಂಪಿಎಂ ಆಶ್ರಯದಲ್ಲಿ ಕನ್ನಡ ಯುವಕರ ಸಂಘದ 51ನೇ ವರ್ಷದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಂಪಿಎಂ ಕಾರ್ಖಾನೆ ಸುಸ್ಥಿತಿಯಲ್ಲಿದ್ದಾಗ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಹಯೋಗದಲ್ಲಿ ಆರಂಭಗೊಂಡ ಗಣೇಶೋತ್ಸವ ರಾಜ್ಯದಲ್ಲಿ ಹೆಸರುವಾಸಿಯಾಗಿತ್ತು. ರಾಜ್ಯಾದ್ಯಂತ ಪ್ರಸಿದ್ಧ ಗಾಯಕ, ಗಾಯಕಿಯರು, ಚಲನಚಿತ್ರ ನಟರು ಸೇರಿ ಅನೇಕ ಕಲಾವಿದರನ್ನು ಕರೆಸಿ ನಗರದ ಜನರಿಗೆ ಮನೋರಂಜನೆ ನೀಡುತ್ತಿತ್ತು. ಪ್ರಸ್ತುತ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಳಿಸಿ ಕಾರ್ಮಿಕ ಕುಟುಂಬ ವಲಸೆ ಹೋಗಿದ್ದು ವಸತಿ ನಿಲಯಗಳು ಗತಕಾಲ ಸೇರುತ್ತಿದ್ದರೂ ಒಂದಷ್ಟು ಯುವಕರು ತಮ್ಮ ಉತ್ಸಾಹದಿಂದ ಆಚರಣೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net