ಎಂಪಿಸಿಎಸ್​ಕೆಗೆ 5.36 ಲಕ್ಷ ರೂ. ನಿವ್ವಳ ಲಾಭ

21 09 2025_BGR RURAL_PAGE_04
ಬೆಟ್ಟಕೋಟೆ ಡೇರಿ ಸಂದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಬಮುಲ್​ ನಿರ್ದೇಶಕ ಎಸ್​. ಪಿ.ಮುನಿರಾಜ್​ ಮಾತನಾಡಿದರು. ಉಪಾಧ್ಯೆ ಅಂಜಿನಮ್ಮ, ನಿರ್ದೇಶಕರಾದ ಮುನೇಗೌಡ, ಸಿದ್ದರಾಮಪ್ಪ, ಕೃಷ್ಣಪ್ಪ, ಬಿ.ವಿ.ರವಿ, ಮುನಿಕೃಷ್ಣಪ್ಪ, ರಾಮಕೃಷ್ಣಪ್ಪ, ಚನ್ನಕೃಷ್ಣಪ್ಪ ಇದ್ದರು.
Published on

ಚನ್ನರಾಯಪಟ್ಟಣ : ಗುಣಮಟ್ಟದ ಹಾಲು ಸರಬರಾಜು ಮಾಡುವುದರಿಂದ ಸಂಕ್ಕೆ ವಾರ್ಷಿಕ 5.36 ಲಕ್ಷ ರೂಪಾಯಿ ನಿವ್ವಳ ಲಾಭ ಬಂದಿದ್ದು, ಸಂ ಅಭಿವೃದ್ಧಿಯಾಗುತ್ತಿದೆ ಎಂದು ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜ್​ ಹೇಳಿದರು.

ದೇವನಹಳ್ಳಿ ತಾಲೂಕು ಬೆಟ್ಟಕೋಟೆ ಹಾಲು ಉತ್ಪಾದಕರ ಸಹಕಾರ ಸಂದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಮಾಡುವ ರೈತರಿಗೆ ಬಮುಲ್​ನಿಂದ ಹಲವು ಸೌಲಭ್ಯಗಳು ಸಿಗುತ್ತಿವೆ. ರಾಸುಗಳ ತಪಾಸಣೆಗೆ ಬಮುಲ್​ನಿಂದ ಪಶುವೈದ್ಯರನ್ನು ನೇಮಕ ಮಾಡಲಾಗಿದೆ. ಸಂದಲ್ಲಿ ಕೂಪನ್​ ಹಾಕಿದರೆ ಮನೆ ಬಾಗಿಲಿಗೆ ಪಶು ವೈದ್ಯರು ಬರುತ್ತಾರೆ. ರೈತರು ರಾಸುಗಳ ವಿಮೆ ಮಾಡಿಸಬೇಕು. ಅದರಿಂದ ಅರ್ಧ ಹಣ ರೈತರು ಕಟ್ಟಿದರೇ ಇನ್ನರ್ಧ ಬಮುಲ್​ ಭರಿಸುತ್ತದೆ ಎಂದರು. ಸಂದ ಅಧ್ಯಕ್ಷ ವಸಂತ್​ ಕುಮಾರ್​ ಮಾತನಾಡಿ, ಗುಣಮಟ್ಟದ ಹಾಲು ಸರಬರಾಜು ಮಾಡುವ ರೈತರಿಗೆ ಶೇ.2 ಬೋನಸ್​ ಸಿಗಲಿದೆ ಎಂದು ಹೇಳಿದರು. ನಿರ್ದೇಶಕರಾದ ಸುರೇಶ್​, ತಿಮ್ಮೇಗೌಡ, ನಾಗೇಂದ್ರ ಸ್ವಾಮಿ, ಲಕ್ಷ$್ಮಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್​.ನಾರಾಯಣಸ್ವಾಮಿ, ಹಾಲು ಪರೀಕ್ಷಕ ಮುರಳಿಧರ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net