ಹೆಡತಲೆ ಸರ್ಕಾರಿ ಶಾಲೆಗೆ ಸಂಸದ ಭೇಟಿ

Published on

ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಯುವ ಅನ್ಸ್ಟಾಪಬಲ್ ಸಂಸ್ಥೆ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಸೈಬರ್ ಹೈಜಿನ್ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಲು ಬಂದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಶಾಲೆಯ ವಿದ್ಯಾರ್ಥಿಗಳು ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಸಂಸದರು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ ರಾಜಮನೆತನದ ಆಳ್ವಿಕೆಯ ಪರಿಚಯವನ್ನು ಮಕ್ಕಳಿಗೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಯುವ ಅನ್ಸ್ಟಾಪಬಲ್ ಸಂಸ್ಥೆಯ ನಿರ್ದೇಶಕ ರಿಷಿಕುಮಾರ್, ಹಿರಿಯ ನಿರ್ದೇಶಕ ಶ್ರೀಕಾಂತ್ ಚಂದ್ರಶೇಖರನ್, ಶಾಲೆಯ ಮುಖ್ಯಶಿಕ್ಷಕ ಬೆಳ್ಳೇಗೌಡ, ಕಾರ್ಯಕ್ರಮದ ಸಂಚಾಲಕರೂ ಆದ ಗಣಿತ ಶಿಕ್ಷಕ ಶ್ರೀಹರ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೈಬೇಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಶಿಕ್ಷಕರಾದ ಬಾಲಚಂದ್ರ ಭಟ್, ಸುಕನ್ಯಾ, ರೇಣುಕಾ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net