

ಕಳಸ: ಕಳಸ ಭದ್ರಾನದಿಗೆ ಪಿಕಪ್ ಸಹಿತ ಬಿದ್ದು ಮೃತಪಟ್ಟ ಶಮಂತ್ ಮನೆಗೆ ಸಂಸದ ಕೋಟ ಶ್ರೀ ನಿವಾಸ ಪೂಜಾರಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಜುಲೈ 24 ರಂದು ಶಮಂತ ಪಿಕಪ್‌ನಲ್ಲಿ ಹೋಗುತ್ತಿರುವಾಗ ಕೊಳಮಗೆ ಎಂಬಲ್ಲಿ ಭದ್ರಾನದಿಗೆ ಬಿದ್ದು ಮೃತ ಪಟ್ಟಿದ್ದ, ಮಗನ ಕಳಕೊಂಡ ತಾಯಿ ಕೂಡ ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಶಮಂತನ ಮನೆಗೆ ಭೇಟಿ ನೀಡಿ ಶಮಂತನ ತಂದೆ ಮತ್ತು ಅಜ್ಜಿಗೆ ಸಾಂತ್ವಾನ ಹೇಳಿದರು.
ಇಬ್ಬರು ಮಕ್ಕಳಲ್ಲಿ ಒಬ್ಬನನ್ನು ಕಳಕೊಂಡೆ, ನನ್ನ ಹೆಂಡತಿ ಮಕ್ಕಳನ್ನು ಓದಿಸೋಕೆ ಸಾಕಷ್ಟು ಸಾಲ ಮಾಡಿದ್ದಳು. ಅಲ್ಲದೆ ಮಗನಿಗೆ ಪಿಕಪ್ ತೆಗೆಸಿಕೊಡಲು ಸಾಲ ಮಾಡಿದ್ದಳು. ನಮ್ಮ ಜಮಿನಿನ ವಿಷಯದಲ್ಲೂ ಉಳ್ಳವರು ಸಾಕಷ್ಟು ಕಿರುಕುಳ ಕೊಡುತ್ತಿದ್ದಾರೆ. ತನ್ನ ಮಗನನ್ನು ಕಳಕೊಂಡ ನನ್ನ ಹೆಂಡತಿ ತನ್ನ ಜೀವವನ್ನು ಕಳೆದುಕೊಂಡಿದ್ದಾಳೆ. ನನ್ನ ದೊಡ್ಡ ಮಗ ಪಿಎಸೈ ಕೆಲಸಕ್ಕೆ ಸೇರಲು ಆಸೆ ಬಯಸಿದ್ದ ಆದರೆ ಸಾಕಷ್ಟು ಲಂಚ ಕೇಳಿರುವುದರಿಂದ ಸಾಧ್ಯವಾಗಗಲಿಲ್ಲ ಎಂದು ಶಮಂತನ ಅಪ್ಪ ಕಣ್ಣಿರೀಟ್ಟರು.
ಇದೇ ತಿಂಗಳಲ್ಲಿ ಮತ್ತೊಮ್ಮ ಕಳಸಕ್ಕೆ ಬರುತ್ತೇನೆ ಆಗ ನಿಮ್ಮ ಮಗನ ಕೆಲಸಕ್ಕೆ ಸಹಾಯ ಮಾಡುವುದಾಗಿ ಸಂಸದರು ಭರವಸೆ ನೀಡಿದರು. ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಗಜೇಂದ್ರ, ನಾಗಭೂಷನ್, ನಾಗೇಶ್ ಭಟ್, ಸುಜಯ ಸದಾನಂದ, ಮಹೇಶ್, ಪ್ರಸಿದ್ದ ಜೈನ್, ಸುಂದರ ಶೆಟ್ಟಿ ಇದ್ದರು.