

ಬೆಳ್ತಂಗಡಿ: ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೋಮವಾರ ಭೇಟಿ ನೀಡಿದರು. ಬಳಂಜ ಸಂಘದ ಪ್ರಗತಿಯ ಕೆಲಸ ಕಾರ್ಯಗಳಿಗೆ ಸಂಸದರ ನಿಧಿಯಿಂದ ಅನುದಾನ ಮಂಜೂರುಗೊಳಿಸುವ ಭರವಸೆ ನೀಡಿದರು.
ಬಳಂಜ ಬಿಲ್ಲವ ಸಂಘದ ವತಿಯಿಂದ ಸಂಸದರನ್ನು ಸನ್ಮಾನಿಸಲಾಯಿತು. ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರವೀಣ್ ಕುಮಾರ್ ಎಚ್.ಎಸ್., ರಂಜಿತ್ ಪೂಜಾರಿ ಮಜಲಡ್ಡ, ಸುರೇಶ್ ಪೂಜಾರಿ ಜೈಮಾತ, ದಿನೇಶ್ ಪೂಜಾರಿ ಕುದ್ರೋಟ್ಟು, ದಿನೇಶ್ ಪೂಜಾರಿ ಅಂತರ, ದಿನೇಶ್ ಪೂಜಾರಿ ನಿಟ್ಟಡ್ಕ, ಯೋಗೀಶ್ ಪೂಜಾರಿ ಕೊಂಗುಳ, ಸಂತೋಷ್ ಪೂಜಾರಿ, ಭಾರತಿ ಸಂತೋಷ್, ಹರೀಶ್ ವೈ. ಮೊದಲಾದವರಿದ್ದರು. ಪತ್ರಕರ್ತ ಜಗದೀಶ್ ಪೂಜಾರಿ ನಿರೂಪಿಸಿದರು.