ರಾಷ್ಟ್ರಕ್ಕೆ ಕೊಡುಗೆ ನೀಡಿದ ಶ್ರೀನಿವಾಸ್ ಪ್ರಸಾದ್: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಸವರಾಜು ಹೇಳಿಕೆ

MP V. Srinivas Prasad condolence meeting mandya
oppo_0
Published on

ಮಂಡ್ಯ: ಸ್ವಾಭಿಮಾನಿ ವಿ.ಶ್ರೀನಿವಾಸ್ ಪ್ರಸಾದ್ ರಾಜ್ಯ, ರಾಷ್ಟ್ರಕ್ಕೆ ತಮದೇ ಆದ ಕೊಡುಗೆ ನೀಡಿದರು ಎಂದು ಜಿ.ಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು ಸ್ಮರಿಸಿದರು.

ಇಲ್ಲಿನ ಸುಭಾಷ್‌ನಗರದಲ್ಲಿರುವ ಬುದ್ಧ ಭಾರತ ಫೌಂಡೇಷನ್ ಕಚೇರಿಯಲ್ಲಿ ಆಯೋಜಿಸಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, 1973ರಲ್ಲಿ ನಾನು ಮತ್ತು ಪ್ರಸಾದ್ ಅವರು ಕಾಲೇಜು ಗೆಳತನದಲ್ಲಿದ್ದವರು. ವಿದ್ಯಾರ್ಥಿ ದಿನಗಳಲ್ಲಿ ಬಾರಿ ಉತ್ಸುಕ ಯುವಕರಾಗಿದ್ದರು. ಅವರ ತಂದೆ ಪ್ರಿಂಟಿಂಗ್ ಮಿಷನ್ ಇಟ್ಟಿದ್ದರು. ಅಲ್ಲಿ ಪ್ರಸಾದ್ ಕೆಲಸ ಮಾಡುತ್ತಿರಲಿಲ್ಲ. 1974ರಲ್ಲಿ ಚುನಾವಣೆ ಬಂತು, ಆ ಸಮಯದಲ್ಲಿ ನಾವೆಲ್ಲ ಸೇರಿ ಪ್ರಸಾದ್ ಅವರನ್ನು ಒಪ್ಪಿಸಿ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕಾರಣ ಪ್ರವೇಶಿಸಿಸಲು ಪ್ರೇರಣೆ ನೀಡಿ, ಠೇವಣಿ ಹಣವನ್ನು ನಾವೇ ಕಟ್ಟಿ ಪ್ರಚಾರ ಮಾಡಿದೆವು. ಚುಣಾವಣೆಯಲ್ಲಿ 11 ಸಾವಿರ ಮತಗಳನ್ನು ಪಡೆದುಕೊಂಡರು. ಅಲ್ಲಿಂದ ಅವರ ರಾಜಕೀಯ ಜೀವನ ಆರಂಭಗೊಂಡು ಮುಂದಿನ ದಿನಗಳಲ್ಲಿ ಅದೃಷ್ಟವೇ ಬದಲಿಸಿತು ಎಂದರು.

ಫೌಂಡೇಷನ್ ಅಧ್ಯಕ್ಷ ವಕೀಲ ಜೆ.ರಾಮಯ್ಯ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಜೀವಿತಾವಧಿಯಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲದಂತ ಜೀವನ ಮತ್ತು ರಾಜಕಾರಣ ನಡೆಸಿದ್ದಾರೆ. ಅವರು ದೂರವಾಗಿರುವುದು ಮಾನವ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ ಎಂದು ನುಡಿದರು.

ನಿವೃತ್ತ ಇಂಜಿನಿಯರ್ ಮಹಾದೇವಸ್ವಾಮಿ, ಕರವೇ ಅಶೋಕ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಎಲ್.ಶಿವಕುಮಾರ್, ಕುಮಾರ್, ಅಮ್ಜದ್ ಪಾಷಾ, ವೆಂಕಟಗಿರಿಯಯ್ಯ, ಅನಿಲ್ಕುಮಾರ್, ಅಭಿಗೌಡ, ಬೊಮ್ಮಯ್ಯ, ಮೋಹನ್‌ಕುಮಾರ್, ನಾಗರಾಜ್, ಡಾ.ಯೋಗೇಂದ್ರಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net