

ಕಲಬುರಗಿ: ನಗರದ ಆಶ್ರಯ ಕಾಲನಿಯಲ್ಲಿ ವಾಸವಾಗಿರುವ 40 ಕುಟುಂಬಗಳ ಶೇಡ್ ಗಳನ್ನು ತೆರವುಗೊಳಿಸಿ ಅವರ ಬದುಕು ಬೀದಿಗೆ ತಂದಿದ್ದು, ಆ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು 40 ಕ್ಕೂ ಅಧಿಕ ನಿರಾಶ್ರಿತ ಕುಟುಂಬದ ಜೊತೆಗೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಹಾಗೂ ವಿಧಾನಪರಿಷತ ಸದಸ್ಯ ಬಿ.ಜಿ ಪಾಟೀಲ್ ಆಹೋರಾತ್ರಿ ಧರಣಿ ಆರಂಭಿಸಿದರು.
ನಲ್ವತ್ತು ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಈ ಧರಣಿ ಹೀಗೆ ನಡೆಯಲಿದೆ. ಆದಷ್ಟು ಬೇಗ ಜನರಿಗೆ ಅನುಕೂಲ ಮಾಡದೇ ಇದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಸದರು ಹೇಳಿದರು. ಕಲ್ಬುರ್ಗಿ ಮಹಾನಗರ ಪಾಲಿಕೆ ವತಿಯಿಂದ ನಡೆದ ಇದು ಒಂದು ಅಮಾನವೀಯ ಕೃತ್ಯ ಎಂದು ಸಂಸದರು ನುಡಿದಿದ್ದಾರೆ.
ಇಂದು ಮಧ್ಯಾಹ್ನ ನಾವು ಇಲ್ಲಿ ಬಂದಾಗ ಈ ಬಡ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾದೇಶಿಕ ಆಯುಕ್ತರು ಭರವಸೆ ನೀಡಿದರು. ಆದರೆ ಆ ಭರವಸೆಯೂ ಕೂಡ ಹುಸಿಯಾಗಿದೆ ಎಂದು ನುಡಿದರು
ಇದೇ ಸಂದರ್ಭದಲ್ಲಿ ಅಲ್ಲಿನ ನಿರಾಶ್ರಿತ ಕುಟುಂಬದ ಮಹಿಳೆಯರು ತಮ್ಮ ಬದುಕು ಬಿದಿಪಾಲು ಆಗಿರುವುದರದಿಂದ ಉಂಟಾದ ಸಮಸ್ಯೆಗಳ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು, ಇದಕ್ಕೆ ನಾವು ನಿಮ್ಮ ಜೊತೆ ಇದ್ದೀನಿ ಎಂದು ಅವರಿಗೆ ಧೈರ್ಯ ತುಂಬಿದರು.
ಈ ಆಶ್ರಯ ಕಾಲನಿಯಂತೆ ಕಲಬುರ್ಗಿಯಲ್ಲಿ ನೂರಾರು ಕಡೆ ಜನರು ಅತಿಕ್ರಮಣವಾಗಿ ನೆಲೆಸಿದ್ದಾರೆ, ಆದರೆ ನಮ್ಮನ್ನು ಮಾತ್ರ ಬೀದಿಪಾಲು ಮಾಡಿದ್ದಾರೆ ಎಂದು ಮಹಿಳೆಯೊಬ್ಬಳು ಸಂಸದರ ಎದುರು ಅಳಲು ತೋಡಿಕೊಂಡಳು.