ಸಂಸದೆ ಸುಮಲತಾ ಅಂಬರೀಶ್ ನಮಗೆ ಶಾಶ್ವತ ಶತ್ರು ಅಲ್ಲ: ಎಚ್‌ಡಿಕೆ

HDK
Published on

ಮೈಸೂರು: ಸಂಸದೆ ಸುಮಲತಾ ಅಂಬರೀಶ್ ನಮಗೆ ಶಾಶ್ವತ ಶತ್ರು ಅಲ್ಲ. ಅಗತ್ಯವಿದ್ದರೆ ಅವರನ್ನು ಭೇಟಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಮಣ್ಣಿನಲ್ಲಿ ರಾಮಾಂಜನೇಯ ಯುದ್ಧವೇ ನಡೆದು ಹೋಗಿದೆ. ನಾವೆಲ್ಲ ಹುಲು ಮಾನವರು. ದೇವರ ಮುಂದೆ ಯಾವ ಲೆಕ್ಕ ಹೇಳಿ. ರಾಜಕೀಯದಲ್ಲಿ ಹೋರಾಟ, ಜಗಳ ಇದ್ದೇ ಇರುತ್ತದೆ. ನಮಗೇನು ಸುಮಲತಾ ದೂರ ಅಲ್ಲ. ಅಂಬರೀಶ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಗಿದ್ದವು ಎಂದರು.

ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಹೇಳಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಾರೆ. ನೀರಾವರಿಗೆ ಎಚ್.ಡಿ.ದೇವೇಗೌಡ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net