ಜಿಲ್ಲಾಡಳಿತ ಭವನದ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ನೌಕರನ ಪರಿಚಯ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದ ಸಂಸದ ಸುಧಾಕರ್

IMG_20250808_133109.jpg
Published on

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೊರ ಗುತ್ತಿಗೆಯಾಧಾರಿತ ನೌಕರ ಬಾಬು ಪರಿಚಯ ಇಲ್ಲ. ನಾನು ಅವರನ್ನು ನೋಡಿಯೇ ಇಲ್ಲ ಎಂದು ಸಂಸದ ಡಾ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬು ಆತ್ಮಹತ್ಯೆ ದುರದೃಷ್ಟಕರ.‌ ಇಂತಹ ಘಟನೆ ನಡೆಯಬಾರದಾಗಿತ್ತು. ಆದಷ್ಟು ಬೇಗ ಅವರ ಕುಟುಂಬದವರನ್ನು ಭೇಟಿ ನೀಡಿ, ಸ್ವಾಂತನ ಹೇಳುತ್ತೇನೆ ಎಂದು ತಿಳಿಸಿದ್ದಾರೆ‌‌.

*ರಾಜಕೀಯ ದುರುದ್ದೇಶದ ಆರೋಪ*
ಡೆತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಬಾಬು ಪರಿಚಯವಿರಲಿಲ್ಲ. ಪ್ರಕರಣದ ಪಾರದರ್ಶಕ ತನಿಖೆಯಾಗಲಿ ಎಂದು ಸಂಸದ ಡಾ ಕೆ.ಸುಧಾಕರ್‌ ಒತ್ತಾಯಿದ್ದಾರೆ.
ಮೃತನು ಆರೋಪಿಸಿರುವ ಎನ್‌ಎನ್‌ ಆರ್‌ ನಾಗೇಶ್‌ ಮಾವ ಮಾತ್ರ ಗೊತ್ತು. ಅವರು ಮೊದಲಿನಿಂದಲೂ ನಿಷ್ಠಾವಂತರಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಮೊದಲು ಪೊಲೀಸರು ಪಾರದರ್ಶಕ ತನಿಖೆಯನ್ನು ನಡೆಸಲಿ, ಇದರ ನಡುವೆ ಪೊಲೀಸರ ಮೇಲೆ ಒತ್ತಡ ಹೇರಿ ಬಲವಂತವಾಗಿ ಕುಟುಂಬಸ್ಥರೊಂದಿಗೆ ನನ್ನ ಹೆಸರು ಸೇರಿಸಿ ದೂರು ಕೊಡಿಸುವುದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ಯಾರೇ ಆಗಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ. 

*ಕಾಂಗ್ರೆಸ್ ಶಾಸಕರ ಹೆಸರು ಏಕಿಲ್ಲ ಎಫ್ ಐ ಆರ್ ನಲ್ಲಿ*
ಹಿಂದೆ ಆತ್ಮಹತ್ಯೆ ಪ್ರಕರಣಗಳಲ್ಲಿ ಡೆತ್ ನೋಟ್ ನಲ್ಲಿ ಹೆಸರು ನಮೂದಿಸಿದ್ದರೂ ಕಾಂಗ್ರೆಸ್ ಶಾಸಕರ ವಿರುದ್ಧ ಎಫ್ ಐ ಆರ್ ಹಾಕಿಲ್ಲ. ಆದರೆ, ಇಲ್ಲಿ ಮಾತ್ರ ಸುಧಾಕರ್ ಹೆಸರು ಸೇರಿಸಬೇಕು ಎಂದು ಕಾಂಗ್ರೆಸ್ ನಾಯಕರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ‌ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net