

ಕೊಪ್ಪಳ: ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪರಿವರ್ತಕ ಸೇರಿ ಇತರ ಸೌಲಭ್ಯಗಳನ್ನು ಹಿಂಪಡೆದ ಕ್ರಮ ಖಂಡಿಸಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಬರಗಾಲ ಸಮಯದಲ್ಲಿ ಈ ಆದೇಶ ಮಾಡಿದ್ದಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಕಿಡಿ ಕಾರಿದರು.
ಈ ಮೊದಲು ಐಪಿ ಸೆಟ್ ಗಳನ್ನು ಅಕ್ರಮ, ಸಕ್ರಮದಡಿ ಸೌಲಭ್ಯ ನೀಡಲಾಗುತ್ತಿತ್ತು. ಸೌರ ವಿದ್ಯುತ್ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರದ್ದುಪಡಿಸಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ.
ಅಲ್ಲದೇ ಲೋಡ್ ಶೆಡ್ಡಿಂಗ್ ಕಾರಣ ನೀರಾವರಿ ಸೌಲಭ್ಯ ಇರುವ ರೈತರಿಗೂ ಸೌಲಭ್ಯ ಮರೀಚಿಕೆಯಾಗಿದೆ. ಮೊದಲೇ ರಾಜ್ಯದಲ್ಲಿ ಬರ ಇದೆ. ರೈತರು ಚಿಂತೆಯಲ್ಲಿದ್ದಾರೆ. ಅವರ ಪರ ಸರ್ಕಾರ ನಿಲ್ಲಬೇಕು. ಅದು ಬಿಟ್ಟು ಅವರ ಹೊಟ್ಟೆ ಮೇಲೆ ಬಂಡೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಿರ್ಧಿಷ್ಟಾವಧಿ ನಿರಶನ: ಸರ್ಕಾರದ ನಡರ ಖಂಡಿಸಿ ಸಂಸದ ಸಂಗಣ್ಣ ಕರಡಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಸರ್ಕರ ಆದೇಶ ರದ್ದುಪಡಿಸುವವರೆಗೆ ಹಗಲು-ರಾತ್ರಿ ಉಪವಾಸ ಮುಂದುವರಿಸುವುದಾಗಿ ಸಂಗಣ್ಣ ತಿಳಿಸಿದರು.
ಸಂಗಟಿ ಬೆಂಬಲ: ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು, ಮಾಜಿ, ಹಾಲಿ ಜನ ಪ್ರತಿನಿಧಿಗಳು ಭಾಗಿಯಾಗಿ ಬೆಂಬಲ ಸೂಚಿಸಿದರು.