ಕುಮಾರಣ್ಣನ ನಿರ್ಧಾರದ ಮೇಲೆ ಕುಟುಂಬದವರಿಗೆ ಟಿಕೆಟ್

PRAJWAL REVANNA NEW
Published on

ಹುಬ್ಬಳ್ಳಿ : ದೇವೆಗೌಡರ ಕುಟುಂಬದಲ್ಲಿ ಯಾರಿಗೆ ಲೋಕಸಭೆ ಟಿಕೆಟ್ ಕೊಡಬೇಕು ಎಂಬುದಕ್ಕೆ ಕುಮಾರಣ್ಣನವರೇ ಉತ್ತರ ಕೊಡುತ್ತಾರೆ. ನಾನಂತೂ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಜನರು ನನ್ನ ಕೆಲಸ ಗುರುತಿಸಿದ್ದಾರೆ ಎಂದರು.

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯಾಗಿರುವುದು ಸಂತಸ ಮೂಡಿಸಿದೆ. ದೇಶದಲ್ಲಿ ಧರ್ಮ ಉಳಿಯಬೇಕು ಎಂಬುದು ಸಾರ್ವಜನಿಕರ ಅಪೇಕ್ಷೆಯಾಗಿತ್ತು. ಇಡೀ ಜಗತ್ತು ಒಗ್ಗಟ್ಟಾಗಿ ಶ್ರೀರಾಮೋತ್ಸವ ಆಚರಿಸಿದೆ. ಎಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಿದರು.

ಶೀಘ್ರದಲ್ಲಿಯೇ ನಾನು ಸಹ ಅಯೋಧ್ಯೆಗೆ ಭೇಟಿ ನೀಡಿ, ಶ್ರೀ ರಾಮ ಮಂದಿರಕ್ಕೆ ಹೋಗಿಬರುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net