

ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜಮಠದಲ್ಲಿ ಬುಧವಾರ ನಡೆದ ಕಾರ್ತಿಕ ದಿಪೋತ್ಸವದಲ್ಲಿ ಸಂಸದ ರಮೇಶ ಜಿಗಜಿಣಗಿ ಭಾಗಿಯಾದರು.
ಮಠದ ಪೂಜ್ಯರಿಂದ ಆಶೀರ್ವಾದ ಮತ್ತು ಗೌರವ ಸ್ವೀಕರಿಸಿ, ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರ ಜೀವನದಲ್ಲಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಪೇಜಾವರ ಅಧೋಕ್ಷಜ ಮಠದ ಲೆಕ್ಕಪರಿಶೋಧಕ ಹರಿದಾಸ ಭಟ್ ಹಾಗೂ ಕಾರ್ಯದರ್ಶಿ ಶ್ರೀಪಾದ ಸಿಂಗಮಲ್ಲಿ ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ, ಪ್ರಕಾಶ ಅಕ್ಕಲಕೋಟ, ಅಶೋಕ ರಾವ್, ವಿಕಾಸ ಪದಕಿ, ವಿಜಯ ಜೋಶಿ, ಪಂ.ವಾಸುದೇವ ಅಗ್ನಿಹೋತ್ರಿ ಮತ್ತಿತರರಿದ್ದರು.