

ಕುಂದಾಪುರ: ಕರಾವಳಿ ಮತ್ತು ಬೆಂಗಳೂರು ನಡುವೆ ಇರುವ ಹಲವು ರೈಲ್ವೆ ಸಮಸ್ಯೆಗಳ ಪರಿಹಾರಕ್ಕಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ನೈಋತ್ಯ ರೈಲ್ವೆ ಜನರಲ್ ವ್ಯಾನೇಜರ್ ಮುಕುಲ್ ಶರಣ್ ವಾಥುರ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಭೇಟಿ ವಾಡಿ ಚರ್ಚಿಸಿದರು.
ರೈಲ್ವೇ ಸುರಕ್ಷತಾ ಆಯುಕ್ತರ ಕಠಿಣ ನಿಯಮಗಳನ್ನು ಘಾಟ್ ಭಾಗದಲ್ಲಿ ಸರಳೀಕರಣ ವಾಡುವಂತೆ ಮತ್ತು ವೇಗ ಮಿತಿಯನ್ನು 30 ಕಿ.ಮೀ ನಿಂದ 40 ಕಿ.ಮೀ.ಗೆ ಘಾಟ್ ಭಾಗದಲ್ಲಿ ಹೆಚ್ಚಿಸಲು ಮನವಿ ಮಾಡಿದರು. ನೈಋತ್ಯ ರೈಲ್ವೆ ವೇಗ ಹೆಚ್ಚಳ ಮತ್ತಿತರ ಸರಳೀಕರಣದ ಪ್ರಸ್ತಾಪವನ್ನು ರೈಲು ಮಂಡಳಿಗೆ ಕಳಿಸಲು ತೀರ್ವಾನಿಸಲಾಗಿದೆ ಎಂದರು.
ಹಾಸನ-ಬೆಂಗಳೂರು ನಡುವೆ ವೇಗ ವರ್ಧನೆ, ವಿದ್ಯುದೀಕರಣ, ಪಂಚಗಂಗಾ ರೈಲಿನ ಸಮಯ ಪಾಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಸಂಸದರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗಣೇಶ್ ಪುತ್ರನ್, ರೈಲ್ವೆ ಸಮಯ ಪಟ್ಟಿ ಸಲಹಾಗಾರ ಪೃಥ್ವಿ ಕುಂದರ್, ಸಾರಿಗೆ ತಜ್ಞ ಅಭಿಜಿತ್ ಸಾರಂಗ್, ಕುಂದಾಪುರ ರೈಲ್ವೆ ಸಮಿತಿಯ ವಿವೇಕ್ ನಾಯಕ್ ಉಪಸ್ಥಿತರಿದ್ದರು.