

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರ ಪ್ರದೇಶಾಭಿವೃದ್ದಿ ನಿಧಿಯಡಿ 26.5 ಲಕ್ಷ ರೂ. ವೆಚ್ಚದಲ್ಲಿ ನಗರದ ವಿವಿಧೆಡೆ ವಿವಿಧ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಲಾಯಿತು.
ಇಟ್ಟಿಗೆಗೂಡಿನಲ್ಲಿ 5 ಲಕ್ಷ ರೂ.ವೆಚ್ಚದಲ್ಲಿ ಮೈಸೂರು ವೆಲ್ಲಾಳ ಆಸೋಸಿಯೇಷನ್‌ನ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿಸಲಾಯಿತು. ಇಟ್ಟಿಗೆಗೂಡು ಸರ್ಕಾರಿ ಆಸ್ಪತ್ರೆ, ಮೈಸೂರು ಮೃಗಾಲಯ ಎದುರು ಮತ್ತು ಕುವೆಂಪುನಗರ ಬಸ್ ಡಿಪೋ ಬಳಿ ತಲಾ 7 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಗೌರಿಶಂಕರ ನಗರದಲ್ಲಿ 7.5 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕೊಳವೆ ಬಾವಿ ನಿರ್ಮಾಣ ಹಾಗೂ ಉದ್ಯಾನದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡ ಗೋಕುಲ್ ಗೋವರ್ಧನ್, ಪಾಲಿಕೆ ಮಾಜಿ ಸದಸ್ಯರಾದ ಛಾಯಾದೇವಿ, ವನಿತಾ ಪ್ರಸನ್ನ ಹಾಗೂ ಇತರರು ಇದ್ದರು.