

ಚನ್ನಪಟ್ಟಣ
ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ನೀಡಿರುವ ಎಂಟ್ರಿ ಎಕ್ಸಿಟ್ ಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಖುದ್ದು ಸಂಸದ ಪ್ರತಾಪ ಸಿಂಹ ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಸಂಕಲಗೆರೆ ಗೇಟ್ ಮತ್ತು ಬೈರಾಪಟ್ಟಣ ಗ್ರಾಮದ ಬಳಿ ದಶಪಥ ಹೆದ್ದಾರಿಗೆ ನೀಡಿರುವ ಎಂಟ್ರಿ ಹಾಗೂ ಎಕ್ಸಿಟ್ ಗಳನ್ನು ಸಂಸದ ಪ್ರತಾಪಸಿಂಹ ವೀಕ್ಷಿಸಿದರು. ಹೆದ್ದಾರಿಯ ಒಳಗೆ ಹಾಗೂ ಹೆದ್ದಾರಿಯಿಂದ ಹೊರಗೆ ಸರ್ವೀಸ್ ರಸ್ತೆಗೆ ಹೋಗಲು ಒಂದೆಕಡೆಯಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ನೀಡಲಾಗಿತ್ತು.
ಇದು ವಾಹನ ಸವಾರರಿಗೆ ತೊಂದರೆಯಾಗಿದ್ದು, ಈ ಬಗ್ಗೆ ವಾಹನ ಸವಾರರಲ್ಲಿ ಅಪಸ್ಪರ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ, ದಶಪಥ ಹೆದ್ದಾರಿಯಲ್ಲಿರುವ ಎಲ್ಲಾ ಎಂಟ್ರಿ ಹಾಗೂ ಎಕ್ಸಿಟ್ ಸ್ಥಳಗಳನ್ನು ಮಂಗಳವಾರ ಪರಿಶೀಲನೆ ನಡೆಸಿದರು.
ಈ ವೇಳೆ ಯೋಜನಾ ನಿರ್ದೇಶಕ ರಾಹುಲ್ ಕುಮಾರ್ ಗುಪ್ತಾ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.