ಮೈಸೂರು: ರಾಜ್ಯದ ಜನರು 5 ವರ್ಷ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆಯೇ ಹೊರತು ಮರದ ಮೇಲೆ ಕೂತು ಕಾ..ಕಾ..ಅನ್ನೋಕ್ಕೆ ಅಧಿಕಾರ ನೀಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಯಾವುದೇ ನಗರಕ್ಕೆ ಭೇಟಿ ನೀಡುವ ಸಂದರ್ಭ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ. ಎಲ್ಲರು ಅವರ ಬಳಿಗೆ ಹೋಗಲು ಅವಕಾಶ ಇರುವುದಿಲ್ಲ. ಈ ಕಾರಣಕ್ಕೆ ಬೆಂಗಳೂರಿಗೆ ಇಂದು ಮೋದಿ ಭೇಟಿ ನೀಡಿದ ಸಂದರ್ಭ ಬಿಜೆಪಿ ರಾಜ್ಯ ನಾಯಕರು ಬ್ಯಾರಿಕೇಡ್ ಹಿಂಭಾಗ ನಿಂತಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಟೀಕೆ ಮಾಡುವುದು ಸರಿಯಲ್ಲ. ಇಂತಹ ಟೀಕೆ ಮಾಡುವ ಬದಲು ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿ ಎಂದರು.