ಎಚ್ಡಿಕೆ ವಿರುದ್ಧ ಹೊರ ಜಿಲ್ಲೆಯವರೆನ್ನುವ ಟೀಕೆ: ಸ್ವಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ನಾಯಕರ ಮಾಹಿತಿ ಕೊಟ್ಟ ಸಂಸದ..!

MP Pratap Simha criticized Congress mandya
Published on

ಮಂಡ್ಯ: ಜೂ.4ರಂದು ಮೋದಿ ಮತ್ತೊಮ್ಮೆ ಪ್ರಧಾನಿ ಆಗಿ ಆಯ್ಕೆ ಆಗುತ್ತಾರೆ. ಕಾಂಗ್ರೆಸ್‌ನವರ ಸ್ಥಿತಿ 40 ಸ್ಥಾನ ದಾಟುವುದು ಕಷ್ಟವಾಗಿದೆ. ದೇಶ ಕಾಯಲು ಮೋದಿ, ಕಾವೇರಿ ಕಾಯಲು ಕುಮಾರಣ್ಣ ಆಯ್ಕೆ ಆಗಬೇಕು. ಮೋದಿ ಸಂಪುಟದಲ್ಲಿ ಎಚ್‌ಡಿಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.

ನಗರದಲ್ಲಿ ಆಯೋಜಿಸಿದ್ದ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಲಹಾಬಾದ್‌ನಲ್ಲಿ ಹುಟ್ಟಿದ ಇಂದಿರಾಗಾಂಧಿ ಚಿಕ್ಕಮಗಳೂರು, ಇಟಲಿಯಲ್ಲಿ ಹುಟ್ಟಿದ ಸೋನಿಯಾ ಗಾಂಧಿ ಬಳ್ಳಾರಿ, ದೆಹಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ ವಯನಾಡಿಗೆ ಹೋಗಬಹುದು. ಮೈಸೂರಲ್ಲಿ ಹುಟ್ಟಿದ ಸಿದ್ದರಾಮಯ್ಯ ಬಾದಾಮಿಗೆ ಓಡಿ ಹೋಗಬಹುದು. ಕಾವೇರಿ ಉಳಿಸಿದ ದೇವೇಗೌಡರ ಮಗ ಹೊರಗಿನವರು ಆಗುತ್ತಾರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬಂತು ಬರಗಾಲ ಕಾಲಿಟ್ಟಿದೆ. ಕುಮಾರಸ್ವಾಮಿ, ಯಡಿಯೂರಪ್ಪ ಸಿಎಂ ಆದಾಗ ರಾಜ್ಯ ಸಮೃದ್ಧವಾಗಿತ್ತು. ಸಿದ್ದರಾಮಯ್ಯ ಸಿಎಂ ಆದಾಗ ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ಕಾವೇರಿ ವಿಚಾರದಲ್ಲಿ ಹಿನ್ನಡೆ ಆದಾಗ ಸಚಿವ ಚಲುವರಾಯಸ್ವಾಮಿ ಧ್ವನಿ ಎತ್ತಲಿಲ್ಲ. ಸ್ಟಾಲಿನ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಕಾವೇರಿ ವಿಚಾರದಲ್ಲಿ ಎದೆಗಾರಿಕೆ ತೋರಲಿಲ್ಲ. ಮಂಡ್ಯ ರೈತರ ಹಿತ ಕಾಯುವ ಕೆಲಸ ಮಾಡಲಿಲ್ಲ. ಆದರೆ ಕಾವೇರಿ ವಿಚಾರದಲ್ಲಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು ದೇವೇಗೌಡರು. ಈಗ ಎಚ್‌ಡಿಡಿ ಮಗ ಅಭ್ಯರ್ಥಿ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಈಗಾಗಲೇ ಎಚ್‌ಡಿಕೆ 2 ಲಕ್ಷ ಮತದ ಅಂತರದಲ್ಲಿ ಗೆದ್ದಾಗಿದೆ. ಅಂಬರೀಷ್ ನಂತರ ಮಂಡ್ಯಕ್ಕೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ. ದೇವೇಗೌಡರ ಇರಲಿಲ್ಲ ಎಂದರೆ ಚಲುವರಾಯಸ್ವಾಮಿ ಜಿಪಂ ಸದಸ್ಯ ಕೂಡ ಆಗುತ್ತಿರಲಿಲ್ಲ ನೆನಪಿರಲಿ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕುಮಾರಣ್ಣ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net