ಕಲ್ಕೆರೆಯಲ್ಲಿ ಸಮುದಾಯ ಭವನ

IMG_20231020_165859
Published on


ನುಗ್ಗೇಹಳ್ಳಿ: ಕಲ್ಕೆರೆಯಲ್ಲಿ ಸಮುದಾಯ ಭವನ ಹಾಗೂ ಬಸ್ ನಿಲ್ದಾಣ ನಿರ್ಮಾಣ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.


ಹೋಬಳಿಯ ಕಲ್ಕೆರೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಇತ್ತೀಚೆಗೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯಿಂದ 72,000 ಸಾವಿರ ಕುಟುಂಬಗಳಿಗೆ ಸೌಲಭ್ಯ ಒದಗಿಸುವಲ್ಲಿ ಶಾಸಕರ ಪರಿಶ್ರಮವಿದೆ ಎಂದು ಶ್ಲಾಘಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಪಕ್ಷಾತೀತವಾಗಿ 1223 ರೈತರಿಗೆ 8 ಕೋಟಿ ರೂ. ಸಾಲ ವಿತರಿಸಲಾಗಿದೆ. ಕಲ್ಕೆರೆ ವೃತ್ತದ ನಿರಾಶ್ರಿತರಿಗೆ ಒಂದು ತಿಂಗಳಲ್ಲಿ ಹಕ್ಕುಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಜೆ.ಕೆ.ಭವ್ಯಾ ಮಧುಗೌಡ, ಇಒ ಹರೀಶ್, ಇಂಜಿನಿಯರ್ ರುಕ್ಮಣಿ, ಪಿಡಿಒ ಗಂಗಾಧರ್, ಗ್ರಾಪಂ ಸದಸ್ಯರಾದ ವಾಸುದೇವ್, ರಮೇಶ್, ಮುಖಂಡರಾದ ನಾಗೇಗೌಡ, ಧರ್ಮರಾಜ, ಬಸವರಾಜು, ಕುಮಾರಸ್ವಾಮಿ, ಟಿ.ಎನ್.ಮಧು, ಗೋಪಾಲ್, ಆನಂದ್, ಬೈರೇಗೌಡ ಇತರರು ಹಾಜರಿದ್ದರು.

ಫೋಟೋ ಸುದ್ದಿ
ಕಲ್ಕೆರೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಸಂಸದ ಪ್ರಜ್ವಲ್ ರೇವಣ್ಣ ಉದ್ಘಾಟಿಸಿದರು. ಸಿ.ಎನ್.ಬಾಲಕೃಷ್ಣ, ಭವ್ಯಾ ಮಧುಗೌಡ, ಹರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net