

ಮಡಿಕೇರಿ:
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕೊಡಗು ಕಚೇರಿಯನ್ನು ಭಾನುವಾರ ಮಡಿಕೇರಿಯಲ್ಲಿ ಉದ್ಘಾಟಿಸಲಾಯಿತು. ಜಿಲ್ಲಾಡಳಿತ ಭವನದಲ್ಲಿ ಆರಂಭಿಸಲಾಗಿರುವ ನೂತನ ಕಚೇರಿಯಲ್ಲಿ ಪೂಜೆ, ಹೋಮ ನೆರವೇರಿಸಿದ ನಂತರ ರಿಬ್ಬನ್ ಕತ್ತರಿಸುವ ಮೂಲಕ ಕಚೇರಿ ಕಾರ್ಯನಿರ್ವಹಣೆಗೆ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್, ತಮ್ಮ ನೂತನ ಕಚೇರಿ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಜಿಲ್ಲಾಡಳಿತ ಕಟ್ಟಡದಲ್ಲಿ ಆರಂಭವಾಗಿದ್ದು, ಗ್ರಾಮಸ್ಥರು ಸಮಸ್ಯೆಗಳನ್ನು ಈ ಕಚೇರಿಗೆ ನೇರವಾಗಿ ತಲುಪಿಸಬಹುದು. ಇನ್ನು ಮಂದಿನ ದಿನಗಳಲ್ಲಿ ಸಹಾಯಕರು ವಾರದ ಎಲ್ಲಾ ದಿವಸಗಳಲ್ಲೂ ಈ ಕಚೇರಿಯಲ್ಲಿ ಇರುತ್ತಾರೆ.
ಮೈಸೂರು ಮತ್ತು ಕೊಡಗಿನ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸೇವೆ ಮುಡಿಪಾಗಿಡಲಾಗಿದೆ ಎಂದರು.
ವಿಕಸಿತ ಭಾರತದಲ್ಲಿ ಕೊಡಗಿನ ಗ್ರಾಮ ಮಟ್ಟದ ಸೇವೆಗಳಿಗೆ ನಾನು ಸದಾ ಬದ್ಧನಾಗಿ ಸೇವೆ ಸಲ್ಲಿಸಲು ಸಿದ್ದನಿದ್ದೇನೆ. ಕೊಡಗಿನ ಕುಶಾಲನಗರದಿಂದ ಶ್ರೀರಂಗಪಟ್ಟಣದವರೆಗಿನ ಹೆದ್ದಾರಿ ಕಾಮಗಾರಿಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಿ ಕೊಡಗಿನ ಜನತೆಯ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು. ಈಗಾಗಲೇ ಕೇಂದ್ರ ಸÀರ್ಕಾರ ಅನುಮೋದನೆ ನೀಡಿದ್ದು ಇನ್ನು ಕೆಲ ದಿನಗಳಲ್ಲಿ ರಾಷ್ಟಿçÃಯ ಹೆದ್ದಾರಿ 275 ರಲ್ಲಿ ಹೊಸ ಮೇಲ್ಸೇತುವೆ ಮತ್ತು ವರ್ಧಿತ ಸಂಚಾರ ನಿಯಮಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ನವೀಕರಣಗಳನ್ನು ಅನುಮೋದಿಸಲಾಗಿ ಎಂದರು.
ನೂತನ ಕಚೇರಿ ಉದ್ಘಾಟನೆ ಸಂದರ್ಭ ಮಾಜಿ ಸ್ಪೀಕರ್ ಕೆ. ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷÀ ರವಿ ಕುಶಾಲಪ್ಪ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಮಹೇಶ್ ಜೈನಿ, ನಾಗೇಶ್ ಕುಂದಾಲ್ಪಡಿ ಮತ್ತಿತರರು ಇದ್ದರು.