

ಗುರುಪುರ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಬಂಟ್ವಾಳ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಜಂಟಿಯಾಗಿ ಆಯೋಜಿಸಿದ ಭತ್ತ ಬೇಸಾಯ ಪ್ರಾತ್ಯಕ್ಷಿಕೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ರ್ಯಾಕ್ಟರ್ ಏರಿ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.
ಪೊಳಲಿಯ ಒಟ್ಟು ಎರಡು ಎಕರೆ ಚೆಂಡಿನ ಗದ್ದೆಯಲ್ಲಿ ಭತ್ತ ಬೇಸಾಯದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಗದ್ದೆಯಲ್ಲಿ ಬರುವ ಇಳುವರಿಯ ಎಲ್ಲ ಲಾಭಾಂಶ ದೇವಸ್ಥಾನಕ್ಕೆ ಸಂದಾಯವಾಗಲಿದೆ ಎಂದು ಬಂಟ್ವಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವ ಮೂರ್ತಿ ಹೇಳಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯ್ಕ, ದೇವಸ್ಥಾನದ ಆನುವಂಶಿಕ ಮೊಕ್ತೇಸರಾದ ಯು.ತಾರನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಆಡಳಿತಾಧಿಕಾರಿ ಜಯಮ್ಮ ಹಾಗೂ ಅರ್ಚಕ, ಸಿಬ್ಬಂದಿ ವರ್ಗ, ತಹಸೀಲ್ದಾರ್ ಎಸ್.ಆರ್.ರಶ್ಮಿ, ಕೃಷಿಕ ಸಮಾಜ ಅಧ್ಯಕ್ಷ ಪದ್ಮರಾಜ ಬಳ್ಳಾಲ್ ಮಾವಂತೂರು, ಕಂದಾಯ ನಿರೀಕ್ಷಕ ರಾಮ್ ಪಾಣೆಮಂಗಳೂರು, ಕರಿಯಂಗಳ ಪಿಡಿಒ ನಯನಾ, ಬಂಟ್ವಾಳ ತಾಲೂಕು ಬಿಜೆಪಿ ಅಧ್ಯಕ್ಷ ದೇವಪ್ಪ ಉಪಸ್ಥಿತರಿದ್ದರು.