ನೇಕಾರಿಕೆಗಿರುವ ಸಮಸ್ಯೆ ನಿವಾರಣೆಗೆ ಯತ್ನ

MP Kota 1
Published on

ಸಂಸದ ಕೋಟ ಪೂಜಾರಿ ಭರವಸೆ

ಉಡುಪಿ ಜಿಲ್ಲಾ ಕೈಮಗ್ಗ ಕೇಂದ್ರಕ್ಕೆ ಭೇಟಿ

ವಿಜಯವಾಣಿ ಸುದ್ದಿಜಾಲ ಉಡುಪಿ

ನೇಕಾರಿಕೆಗೆ ತೊಡಕಾಗಿರುವ ಸಮಸ್ಯೆ ನಿವಾರಣೆಗೆ ಹಾಗೂ ಅಭಿವೃದ್ಧಿ ಕುರಿತಂತೆ ಕೇಂದ್ರ ಸರ್ಕಾರದಿಂದ ದೊರಕಬಹುದಾದ ಯೋಜನೆಗಳಿಗೆ ಶಿಫಾರಸು ಮಾಡುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಉಡುಪಿಯಲ್ಲಿರುವ ಉಡುಪಿ ಜಿಲ್ಲಾ ಕೈಮಗ್ಗ ಮತ್ತು ನೇಕಾರರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ಸಂಬಂಧಿತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

MP Kota 2
ಕೈಮಗ್ಗ ಕೇಂದ್ರದಲ್ಲಿ ಒಟ್ಟು 45 ಕೈಮಗ್ಗ ಹಾಗೂ ಕೇಂದ್ರದ ಸಮರ್ಥ ಯೋಜನೆಯಡಿ ತರಬೇತಿ ಹೊಂದಿದ 36 ನೇಕಾರರು ಕಾರ್ಯ ನಿರ್ವಹಿಸುತ್ತಿದ್ದು ಅವರೊಂದಿಗೆ ಸಂಸದ ಕೋಟ ಪೂಜಾರಿ ಚರ್ಚಿಸಿದರು. ನೇಕಾರಿಕೆಗೆ ಅಗತ್ಯ ಪ್ರೋತ್ಸಾಹ ಹಾಗೂ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಸೂಕ್ತ ಸಹಕಾರ ನೀಡುವುದಾಗಿ ತಿಳಿಸಿದರು.

ನೇಕಾರರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಅನುದಾನ ಹಾಗೂ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಸಂಚರಿಸಲು ಉಚಿತವಾಗಿ ಬಸ್​ ಸಂಚಾರದ ವ್ಯವಸ್ಥೆ ಕಲ್ಪಿಸುವಂತೆ ಸಂಸದ ಕೋಟ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ ಶೆಟ್ಟಿ, ಕೈಮಗ್ಗ ನೇಕಾರರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್​, ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ಬಿ.ಅರುಣಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net