ಗೊರೇಬಾಳ ರೈಲ್ವೆ ನಿಲ್ದಾಣದ ಕಾಮಗಾರಿ ಶೀಘ್ರ ಪೂರ್ಣ

Untitled design (3)
ಗೋರೆಬಾಳದಲ್ಲಿನ ರಾಷ್ಟ್ರೀಯ ಹೆದ್ದಾರಿ ಶ್ರೀಪುರಂ ಜಂಕ್ಷನನಲ್ಲಿ ಮುಖಂಡರು ಸಂಸದ ಕರಡಿ ಸಂಗಣ್ಣಗೆ ಸನ್ಮಾನಿಸಿದರು. ಪ್ರಮುಖರಾದ ದೇವೆಂದ್ರಪ್ಪ ರಾಗಲಪರ್ವಿ,ಅಮರೇಗೌಡ ವಿರುಪಾಪುರ, ವೆಂಕನಗೌಡ ಮಲ್ಕಾಪುರ, ಆರ್.ಕೆ.ಹಿರೇಮಠ, ಮಲ್ಲಿಕಾರ್ಜುನ, ಆರ್.ಸಂತೋಷ ಕುಮಾರ ಇತರರು ಇದ್ದರು.
Published on

ಗೊರೇಬಾಳ: ಕಾರಟಗಿಯಿಂದ ಗೊರೇಬಾಳ ರೈಲ್ವೆ ನಿಲ್ದಾಣದವರೆಗೆ ಕೊನೆಯ ಹಂತದ ಕಾಮಗಾರಿ ನಡೆದಿದೆ. ಅಕ್ಟೋಬರ್‌ನಲ್ಲಿ ರೈಲ್ವೆ ಡೆಮೋ ಸಂಚಾರ ನಡೆಯಲಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ತಿಳಿಸಿದರು.

ಹಳಿ ಹಾಕಲು ಬೀಮ್‌ ತಯಾರಿ

ಗ್ರಾಮದ ರಾಷ್ಟ್ರೀಯ ಹೆದ್ದಾರಿ ಶ್ರೀಪುರಂ ಜಂಕ್ಷನ ಹತ್ತಿರ ರೈಲ್ವೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ರೈಲ್ವೆಯ ಹಳಿ ಹಾಕಲು ಉದ್ದವಾದ ಬೀಮ್‌ಗಳ ತಯಾರಿ ಹೈದರಾಬಾದ್‌ನಲ್ಲಿ ನಡೆದಿದೆ. ಹೆದ್ದಾರಿಯ ಮೇಲೆ ಬೀಮ್ ಅಳವಡಿಸುವ ಕಾರ್ಯ ಇನ್ನು ಹತ್ತು ದಿನಗಳಲ್ಲಿ ಪ್ರಾರಂಭವಾಗಲಿದೆ. ಗೊರೇಬಾಳ ರೈಲ್ವೆ ನಿಲ್ದಾಣದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ರೈಲ್ವೆ ಇಂಜಿನಿಯರ ಸುರೇಂದ್ರ ಅವರು ಕಾಮಗಾರಿಯ ಪ್ರಗತಿಯ ಬಗ್ಗೆ ಸಂಸದ ಸಂಗಣ್ಣಗೆ ಮಾಹಿತಿ ನೀಡಿದರು. ರೈಲ್ವೆ ನಿಲ್ದಾಣದಿಂದ ಗೊರೇಬಾಳ ಗ್ರಾಮದ ವರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಗೊರೇಬಾಳ ಗ್ರಾಪಂ ಅಧ್ಯಕ್ಷೆ ಬಸಮ್ಮ ಅಶೋಕ ಮ್ಯಾಗಳಮನಿ ಅವರು ಸಂಸದ ಕರಡಿ ಸಂಗಣ್ಣಗೆ ಮನವಿ ಸಲ್ಲಿಸಿದರು. ಮುಖಂಡರಾದ ರಾಗಲಪರ್ವಿ ದೇವೇಂದ್ರಪ್ಪ, ಅಮರೇಗೌಡ ವಿರುಪಾಪುರ, ಆರ.ಕೆ.ಹಿರೇಮಠ, ವೆಂಕನಗೌಡ ಮಲ್ಕಾಪುರ, ಮಲ್ಲಿಕಾರ್ಜುನ, ಅಶೋಕ, ಗ್ರಾಪಂ ಸದಸ್ಯ ಆರ್.ಸಂತೋಷ ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net