ರಕ್ಷಣಾ ಸಚಿವರನ್ನು ಭೇಟಿಯಾದ ಕಾಗೇರಿ ಮನವಿ ಮಾಡಿದ್ದೇನು..?

RM-visit-to-see bard
Published on

ಕಾರವಾರ: "ಜನರಿಗೆ ತೊಂದರೆ ಆಗದಂತೆ ನೌಕಾನೆಲೆ ಕೆಲಸ ನಿರ್ವಹಿಸಬೇಕು" ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಖಾತೆ ಸಚಿವ ಸಂಜಯ ಸೇತ್‌ ಅವರಿಗೆ ಮನವಿ ಮಾಡಿದ್ದಾರೆ.

ಇಲ್ಲಿನ ಕದಂಬ ನೌಕಾನೆಲೆಗೆ ಅಧಿಕೃತ ಭೇಟಿಗಾಗಿ ಗುರುವಾರ ಆಗಮಿಸಿದ್ದ ಕೇಂದ್ರ ಸಚಿವರನ್ನು ಸಂಸದ ಕಾಗೇರಿ ಭೇಟಿಯಾದರು. ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯ ಮೇಲೆ ಸಚಿವರು ಮತ್ತು ಸಂಸದರು ಕೆಲಕಾಲ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕಾಗೇರಿ ಅವರು, ಸ್ಥಳೀ ಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಂತ್ರಿ ಯವರಲ್ಲಿ ವಿನಂತಿಸಿದರು .

`ಸೀಬರ್ಡ್ ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು. ನೌಕಾ ಯೋಜನೆಯಲ್ಲಿ ಭೂಮಿ ನೀಡಿದವರಿಗೆ ಇದುವರೆಗೂ ಸಂಪೂರ್ಣ ಪರಿಹಾರ ದೊರೆಯದೇ ಸಮಸ್ಯೆಯಾಗಿರುವ ಕುಸಿತು, ಪ್ರತಿ ವರ್ಷ ಮಳೆಗಾಲದಲ್ಲಿ ನೌಕಾನೆಲೆ ಹೊರಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ನೆರೆ ಪ್ರವಾಹ ಸೃಷ್ಠಿಯಾಗಿ ಜನರ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಾರಿ ಸಹ ಅದು ಪುನರಾವರ್ತನೆಯಾಗಿದ್ದು, ಜನರಿಗೆ ತೊಂದರೆ ಆಗದಂತೆ ನೌಕಾನೆಲೆ ಕೆಲಸ ನಿರ್ವಹಿಸಬೇಕು' ಎಂದು ಮನವಿ ಮಾಡಿದರು.

ನೌಕಾ ಸೇನೆಯ ಉಪ ಮುಖ್ಯಸ್ಥ ವೈಸ್‌ ಅಡ್ಮಿರಲ್‌ ತರುಣ್‌ ಶೋಬ್ತಿ, ಕರ್ನಾಟಕ ನೌಕಾ ವಲಯ ಮುಖ್ಯಸ್ಥೆ ರಿಯರ್‌ ಅಡ್ಮಿರಲ್‌ ಕೆ.ಎಂ.ರಾಮಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net