ಎಥೆನಾಲ್ ಉತ್ಪಾದನೆಗೆ 119.90 ಕೋಟಿ ರೂ. ಅನುದಾನ; ಈರಣ್ಣಾ ಕಡಾಡಿ‌ ಮಾಹಿತಿ

900172.jpg
Published on

ಬೆಳಗಾವಿ:ಕರ್ನಾಟಕ ರಾಜ್ಯದಿಂದ ವಾರ್ಷಿಕ ಸುಮಾರು ೧೪೪ ಕೋಟಿ ಲೀಟರ್‌ಗಳ ಅಂದಾಜು ಎಥೆನಾಲ್ ಸಾಮರ್ಥ್ಯದ ಉತ್ಪಾದನೆಗಾಗಿ ೩೬ ಯೋಜನೆಗಳಿಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಬಡ್ಡಿ ರಿಯಾಯಿತಿ ಯೋಜನೆಯಡಿ ೧೧೯.೯೦ ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ್ ತೇಲಿ ತಿಳಿಸಿದ್ದಾರೆ.
ಸಂಸತ್ತಿನ ಮುಂಗಾರು ಅಽವೇಶನದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಸಚಿವರು, ಜೈವಿಕ ಇಂಧನಗಳ ರಾಷ್ಟಿçÃಯ ನೀತಿ-೨೦೧೮ ರ ಪ್ರಕಾರ, ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಯನ್ನು ಉತ್ತೇಜಿಸಲು, ಅವುಗಳನ್ನು ರಫ್ತು ಮಾಡಲು ಉದ್ದೇಶಿಸಿರುವ ಜೈವಿಕ ಇಂಧನಗಳ ಉತ್ಪಾದನೆಗೆ ಫೀಡ್‌ಸ್ಟಾಕ್ ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧವಿಲ್ಲದೆ ಅನುಮತಿಸಲಾಗಿದೆ.
ವಾಣಿಜ್ಯ ಗುಪ್ತಚರ ಮತ್ತು ಅಂಕಿಅAಶಗಳ ಮಹಾನಿರ್ದೇಶನಾಲಯವು ೨೦೨೨-೨೩ ರ ಹಣಕಾಸು ವರ್ಷದಲ್ಲಿ ಭಾರತೀಯ ವ್ಯಾಪಾರ ವರ್ಗೀಕರಣದ ಅಡಿಯಲ್ಲಿ ೩೫,೨೦,೦೬೪ ಕೆಜಿ ಜೈವಿಕ ಡೀಸೆಲ್ ಮತು ್ತ ಮಿಶ್ರಣವನ್ನು ಹಾರ್ಮೋನೈಸ್ಡ್ ಸಿಸ್ಟಮ್ ಕೋಡ್‌ಗಳನ್ನು ಆಧರಿಸಿ ೩,೮೨,೬೦,೦೦೦ ರಫ್ತು ಮಾಡಲಾಗಿದೆ. ೨೦೨೫-೨೬ರ ವೇಳೆಗೆ ಭಾರತದಲ್ಲಿ ಶೇ ೨೦ ರಷು ್ಟ ಎಥೆನಾಲ್ ಮಿಶ್ರಣದ ಗುರಿಯನ್ನು ಸಾಸಲು ಮಾರ್ಗದರ್ಶನ ನೀಡುತ್ತದೆ.ಎಥೆನಾಲ್ ಸರಬರಾಜು ವರ್ಷ ೨೦೨೧-೨೨ ಕ್ಕೆ ಶೇ.೧೦ ಎಥೆನಾಲ್ ಮಿಶ್ರಣದ ಗುರಿಯನ್ನು ಸಾಸಲಾಗಿದೆ ಎಂದು  ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net