ಸಂಸದ ಜೊಲ್ಲೆ ಕಾರ್ಯ ಶ್ಲಾಘನೀಯ

Published on

ರಾಯಬಾಗ: ನಶಿಸಿ ಹೋಗುತ್ತಿರುವ ದೇಸಿ ಕ್ರೀಡೆಗಳು ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿರುವ ಸಂಸದ ಜೊಲ್ಲೆ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಿ.ಎಂ.ಐಹೊಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಬಿ.ಎ.ಚೌಗಲಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜೊಲ್ಲೆ ಸಮೂಹದಿಂದ ರಾಯಬಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುರುಷ ಮತ್ತು ಮಹಿಳೆಯರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಅಣ್ಣಾಸಾಹೇಬ ಜೊಲ್ಲೆ ಎಂ.ಪಿ.ಟ್ರೋಫಿ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಬಸವಜ್ಯೋತಿ ೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸದಢವಾಗಿರಲು ಸಾಧ್ಯ ಎಂದರು.

ನಂದಿಕುರಳಿ ಪಂಚಲಿಂಗೇಶ್ವರದ ವೀರಭದ್ರ ಸ್ವಾಮೀಜಿ, ಬಾವನಸೌಂದತ್ತಿ ಓಂಕಾರಾಶ್ರಮದ ಶಿವಶಂಕರ ಸ್ವಾಮೀಜಿ, ಕಬ್ಬೂರದ ಗೌರಿಶಂಕರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗುಡೆ, ನ್ಯಾಯವಾದಿ ಎಲ್.ಬಿ.ಚೌಗುಲೆ, ದುಂಡಪ್ಪ ಭೆಂಡವಾಡೆ, ಮಹೇಶ ಭಾತೆ, ರಾಮಚಂದ್ರ ನಿಶಾನಂದಾರ, ಬಸಗೌಡ ಪಾಟೀಲ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಬಸವರಾಜ ಡೊಣವಾಡೆ, ಸದಾಶಿವ ಘೋರ್ಪಡೆ, ಅಶೋಕ ಹರಗಾಪೂರೆ, ಅಣ್ಣಾಸಾಬ ಖೇಮಲಾಪುರೆ, ಅಶೋಕ ಅಂಗಡಿ, ವಿನಯ ಚೌಗುಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net