ಕಾಂಗ್ರೆಸ್ ಪ್ರತಿಭಟನೆ ಖಂಡನೀಯ; ಈರಣ್ಣಾ ಕಡಾಡಿ ಆಕ್ರೋಶ

IMG-20230620-WA0004.jpg
Published on


ಬೆಳಗಾವಿ:ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಆಡಳಿತ‌ಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ತಪ್ಪುಗಳನ್ನು ‌ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ಧ ‌ಪ್ರತಿಭಟನೆ ನಡೆಸುತ್ತಿರುವ ಖಂಡ‌ನೀಯ
ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ವಾಗ್ದಾಳಿ ನಡೆಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯಾವುದೇ ಪೂರ್ವಾಪರ ಯೋಜನೆ ಇಲ್ಲದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿ ಗ್ಯಾರಂಟಿ ಯೋಜನೆಯನ್ನು ಕೊಡುವುದಾಗಿ ಹೇಳಿದರು.
ಕೇಂದ್ರ ಆಹಾರ ಭದ್ರತೆಯಿಂದ ಬಡ ರೇಖೆಯಲ್ಲಿರುವ ಜನರಿಗೆ ತಲಾ ಐದು ಕೆ.ಜಿ.ಅಕ್ಕಿ ನೀಡುತ್ತಾ ಬಂದಿದ್ದೇವೆ. ಅದೇ ದರದಲ್ಲಿ ಎಪಿಎಲ್ ಕಾಡ್೯ ಹೊಂದಿದವರಿಗೆ ಅಕ್ಕಿ ನೀಡುತ್ತಾ ಬಂದಿದೆ. ಸುಮಾರು 80 ಕೋಟಿ ಜನರಿಗೆ ಅಕ್ಕಿ ಪೂರೈಸಿದ್ದೇವೆ ಎಂದರು.
ಆದರೆ ಕಾಂಗ್ರೆಸ್ ಸರಕಾರ ಕೇಂದ್ರ ಆಹಾರ ನಿಗಮ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡುವುದಾಗಿ ಹೇಳಿ ಈಗ ಕೊಡುತ್ತಿಲ್ಲ ಎಂದು ವಿತಂಡವಾದ ಹಾಕುತ್ತಿದ್ದಾರೆ. ಇದು ಶುದ್ಧ ಸುಳ್ಳು. ಗೋದಾಮಿನಲ್ಲಿ ಅಕ್ಕಿ ಇಟ್ಟುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರ ವಿನಾಕಾರಣ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net