ಜನ ಬದಲಾವಣೆ ಬಯಸಿದ್ದಾರೆ: ಜಯಪ್ರಕಾಶ್‌ ಹೆಗ್ಡೆ

IMG-20240407-WA0032
Published on

ಉಡುಪಿ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಜನರು ಸರ್ಕಾರ ಮಾಡಿರುವ ತಪ್ಪುಗಳನ್ನು ಪ್ರಶ್ನಿಸುವಂತಿರಬೇಕು, ವಿರೋಧ ಪಕ್ಷಗಳೂ ಪ್ರಶ್ನಿಸಬೇಕು. ಈ ಬಾರಿಯ ಚುನಾವಣೆಯಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಅಭಿಪ್ರಾಯಪಟ್ಟರು.

ಭಾನುವಾರ ಮೂಡಿಗೆರೆಯ ಕಾಂಗ್ರೆಸ್‌ ಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೇಯನ್ನುದ್ದೇಶಿಸಿ ಮಾತನಾಡಿದರು.

“ಗೆದ್ದ ಸಂಸದರು ವರ್ಷಗಳೇ ಗತಿಸಿದರೂ ತಾನು ಪ್ರತಿನಿಧಿಸಿದ ಕ್ಷೇತ್ರಕ್ಕೆ ಬಾರದಿದ್ದರೆ ಅಲ್ಲಿಯ ಜನ ಬದಲಾವಣೆ ಬಯಸುವುದು ಸಹಜ. ಇಲ್ಲಿಯ ಕೆಲವು ರಸ್ತೆಗಳ ಕಾಮಗಾರಿಯ ಪ್ರಗತಿಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ನನಗೆ ಮತ್ತೊಮ್ಮೆ ಅವಕಾಶ ಸಿಕ್ಕಿದರೆ ಆ ಕೆಲಸಗಳಿಗೆ ಮತ್ತೆ ಜೀವ ತುಂಬುವೆ. ಸಂಸದನಾಗಿ ಅಲ್ಪ ಅವಧಿಯಲ್ಲಿ ಇಲ್ಲಿಯ ಕಾಫಿ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಸಮ್ಯೆಗಳಿಗ ಸ್ಪಂದಿಸಿರುವೆ ಎಂಬ ತೃಪ್ತಿ ಇದೆ ಎಂದು ಹೆಗ್ಡೆ ಹೇಳಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ,
“ದೇಶದಲ್ಲಿ ಬಿಜೆಪಿಯನ್ನು ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ. ಸುಳ್ಳಿನ ರಾಜಕೀಯ ಮಾಡುವವರನ್ನು ಕಿತ್ತೊಗೆಯಬೇಕಾದರೆ ನಾವೆಲ್ಲರೂ ಸಂಘಟಿತರಾಗಿ ಕಾಂಗ್ರೆಸ್‌ ಪಕ್ಷದ ಯಶಸ್ಸಿಗಾಗಿ ಶ್ರಮಿಸಬೇಕು. ಕಾಫಿ ಬೆಳೆಗಾರರ ಹೋರಾಟದಲ್ಲಿ ಸಾಥ್‌ ಕೊಟ್ಟವರು. ಸದ್ಯ ನಡೆಯುತ್ತಿರುವ ಹೈವೇ ಕಾಮಗಾರಿಗೂ ಜಯಪ್ರಕಾಶ್‌ ಹೆಗ್ಡೆಯವರೇ ಕಾರಣ. ಇದುವರೆಗೂ ಪ್ರತಿಯೊಬ್ಬರೂ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಬೆಂಬಲ ನೀಡುತ್ತಿರುವುದು ಖುಷಿಯ ಸಂಗತಿ.  ಚಿಕ್ಕಮಗಳೂರಿನ ಜನರು ಜಯಪ್ರಕಾಶ್‌ ಹೆಗ್ಡೆ ಅವರ ಕಾರ್ಯವೈಖರಿಯನ್ನು ನೋಡಿ ಪ್ರೋತ್ಸಾಹ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ಬಿ.ಎಲ್‌, ಶಂಕರ್‌, ಬಿ.ಬಿ. ನಿಂಗಯ್ಯ, ಜಿಲ್ಲಾ ಡಿಸಿಸಿ ಅಧ್ಯಕ್ಷರಾದ ಅಂಶುಮಂತ ಗೌಡ, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ಸ್ವಾಮಿ, ಮಾಜಿ ಶಾಸಕರಾದ ಕುಮಾರ ಸ್ವಾಮಿ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಜಿ. ಸುರೇಂದ್ರ, ಸ್ಥಳೀಯ ಮುಖಂಡರಾದ ಎಂ.ಪಿ. ಮನು, ಪಿ.ಆರ್‌. ವಿನಯ್‌ ಕುಮಾರ್‌, ಕೆ. ವೆಂಕಟೇಶ್‌, ಬಿ,ಎಸ್‌. ಜಯರಾಮ್‌, ಅಕ್ರಮ್‌ ಹಾಜಿಕ ಸಿ.ಕೆ. ಇಬ್ರಾಹಿಂ, ಎಂ.ಎಸ್‌. ಅನಂತ್‌ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net