ಎಂಪಿ ಎಲೆಕ್ಷನ್ ಒಳಗೆ ಎಸ್ಟಿಗೆ ಸೇರಿಸಿ

kampli
ಕಂಪ್ಲಿಯಲ್ಲಿ ಏರ್ಪಡಿಸಿದ್ದ ಗಂಗಾಮತ ಸಮಾಜದ ಮುಖಂಡರ ಸಭೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಣ್ಣೂರು ನಾಗರಾಜ ಮಾತನಾಡಿದರು. ಪ್ರಮುಖರಾದ ಕರೇಕಲ್ ಮನೋಹರ, ಬಿ.ವೀರಭದ್ರಪ್ಪ, ನೇಣ್ಕಿ ಗಿರೀಶ್, ಬಿ.ಈರಪ್ಪ, ಫಣಿ ಸೋಮಪ್ಪ ಇತರರಿದ್ದಾರೆ.
Published on

ಕಂಪ್ಲಿ: ಲೋಕಸಭಾ ಚುನಾವಣೆಯೊಳಗೆ ಕೇಂದ್ರ ಸರ್ಕಾರ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ದೆಹಲಿ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷ ಮಣ್ಣೂರು ನಾಗರಾಜ ಎಚ್ಚರಿಸಿದರು.

ಇಲ್ಲಿನ ಅತಿಥಿಗೃಹ ಆವರಣದಲ್ಲಿ ಗುರುವಾರ ತಾಲೂಕು ಗಂಗಾಮತಸ್ಥರ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಗಂಗಾಮತಸ್ಥರ ಪರ್ಯಾಯ 39 ಸಮುದಾಯಗಳನ್ನು ಎಸ್ಟಿಗೆ ಸೇರಿಸುವಂತೆ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತ ಬರಲಾಗಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಸರ್ಕಾರ ಮೀನಮೇಷ ಎಣಿಸದೆ ಎಸ್ಟಿಗೆ ಸೇರ್ಪಡೆಗೊಳಿಸಬೇಕು. ತಪ್ಪಿದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಗಂಗಾಮತಸ್ಥ ಸಮುದಾಯದ ಏಕೈಕ ಶಾಸಕ ಭಟ್ಕಳ ಕ್ಷೇತ್ರದ ಮಾಹಂಕಾಳ್ ವೈದ್ಯಗೆ ಸಚಿವ ಸ್ಥಾನ ನೀಡಲೇಬೇಕು. ಬಾಬುರಾವ್ ಚಿಂಚನಸೂರುಗೆ ಎಂಎಲ್‌ಸಿ ಸ್ಥಾನ ನೀಡಬೇಕು. ಗಂಗಾಮತಸ್ಥರಿಗೆ ನಿಗಮ, ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ತಾಪಂ, ಜಿಪಂ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಕರೇಕಲ್ ಮನೋಹರ, ತಾಲೂಕು ಅಧ್ಯಕ್ಷ ಬಿ.ವೀರಭದ್ರಪ್ಪ, ಉಪಾಧ್ಯಕ್ಷ ನೇಣ್ಕಿ ಗಿರೀಶ್, ಪದಾಧಿಕಾರಿಗಳಾದ ಬಿ.ಈರಪ್ಪ, ಬಿ.ರಮೇಶ್, ಫಣಿ ಸೋಮಪ್ಪ, ಜಿ.ರಾಘವೇಂದ್ರ, ಜೆ.ರೇಣುಕಪ್ಪ, ಉಡೇಗೋಳ್ ವೆಂಕಟೇಶ್, ಕೆ.ನಾಗರಾಜ, ಯು.ಶರಣಪ್ಪ, ಶಿವಮೂರ್ತಿ, ಶಿವಕುಮಾರ್, ಬಾಗಲಿ ಶರಣಪ್ಪ, ಸಣ್ಣ ದುರುಗಪ್ಪ, ಮಣ್ಣೂರು ಶಿವಪ್ಪ, ಅಯ್ಯೋದಿ ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net