ಎಂಪಿ ಚುನಾವಣೆ ಮತ ಎಣಿಕೆ ಹೇಗೆ ನಡೆಯಲಿದೆ ಇಲ್ಲಿದೆ ವಿವರ

Gangubayi-Manakar
Published on

ಕಾರವಾರ: ಕುಮಟಾ ಎ.ವಿ.ಬಾಳಿಗಾ ಕಾಲೇಜ್‌ನಲ್ಲಿ ಜೂನ್4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನ 12 ರೊಳಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಎಣಿಕೆ ಪಾರದರ್ಶಕವಾಗಿ ನಡೆಯಲು ಪ್ರತಿ ಟೇಬಲ್‌ಗೂ ಒಂದೊAದು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.ಸುಲಲಿತವಾಗಿ ನಡೆಸಲು ಸಿಬ್ಬಂದಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಒಟ್ಟು 562 ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಅವರು ಯಾವ ಕ್ಷೇತ್ರ, ಯಾವ ಟೇಬಲ್‌ನಲ್ಲಿ ಎಣಿಕೆ ಕಾರ್ಯ ನಡೆಸಬೇಕು ಎಂಬುದನ್ನು ರ‍್ಯಾಂಡಮೈಜೇಶನ್ ಮೂಲಕ ನೇಮಕ ಮಾಡಲಾಗುತ್ತಿದೆ.
ಎಣಿಕೆ ಕಾರ್ಯದ ಬಗ್ಗೆ ಎಲ್ಲ ಅಭ್ಯರ್ಥಿಗಳ ಅಥವಾ ಅವರ ಪರ ಏಜೆಂಟರ ಸಭೆ ಕರೆದು ವಿವರ ನೀಡಲಾಗಿದೆ. ಅಂದು ಬೆಳಗ್ಗೆ 7 ಕ್ಕೆ ಏಜೆಂಟರ ಸಮ್ಮುಖದಲ್ಲೇ, ವಿಡಿಯೋ ಶೂಟಿಂಗ್‌ನಿಂದಿಗೆ ಸ್ಟ್ರಾಂಗ್‌ ರೂಂನ ಬಾಗಿಲು ತೆರೆಯಲಾಗುವುದು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ 7.30 ರಿಂದಲೇ ಪ್ರಾರಂಭವಾಗಲಿದೆ. ಇವಿಎಂ ಎಣಿಕೆ 8 ಗಂಟೆಯ ನಂತರ ಶುರುವಾಗಲಿದೆ ಎಂದರು.
ವೀಕ್ಷಣೆಗೆ ಕಾಂಗ್ರೆಸ್‌ನ 136, ಬಿಜೆಪಿಯ 141, ಎಂಇಎಸ್‌ನ ನಿರಂಜನ ದೇಸಾಯಿ 18, ಸೇರಿ 300 ಕ್ಕೂ ಅಽಕ ಕೌಟಿಂಗ್ ಏಜೆಂಟರಿಗೆ ಪಾಸ್ ನೀಡಲಾಗಿದೆ. ಮತ ಎಣಿಕೆ ಸಿಬ್ಬಂದಿಗೆ ಪ್ರತಿ ಕ್ಷೇತ್ರಕ್ಕೆ ಒಂದರಂತೆ ಪ್ರತ್ಯೇಕ ಸಮವಸ್ತ್ರ ನೀಡಲಾಗಿದೆ ಎಂದು ವಿವರಿಸಿದರು. ಎಡಿಸಿ ಪ್ರಕಾಶ ರಜಪೂತ ಸುದ್ದಿಗೋಷ್ಠಿಯಲ್ಲಿದ್ದರು.

ಖಾನಾಪುರದಲ್ಲಿ ಅತಿ ಹೆಚ್ಚು ಸುತ್ತು

ಪ್ರತಿ ಕ್ಷೇತ್ರಕ್ಕೆ ಒಂದು ಕೋಣೆಯನ್ನು ಮಾಡಲಾಗಿದ್ದು, ಅಲ್ಲಿ 14 ಟೇಬಲ್‌ಗಳನ್ನು ಹಾಕಲಾಗಿದೆ. ಒಟ್ಟು 1979 ಮತ ಯಂತ್ರಗಲ್ಲಿ ದಾಖಲಾದ ಮತಗಳನ್ನು ಎಣಿಕೆ ಮಾಡಬೇಕು. ಖಾನಾಪುರದಲ್ಲಿ 23, ಕಾರವಾರ ಹಾಗೂ ಶಿರಸಿ ತಲಾ 19, ಭಟ್ಕಳ-18, ಕಿತ್ತೂರು ಹಾಗೂ ಯಲ್ಲಾಪುರ ತಲಾ-17, ಕುಮಟಾ ಹಾಗೂ ಹಳಿಯಾಳದಲ್ಲಿ ತಲಾ 16 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲ ಕ್ಷೇತ್ರಗಳ ಒಂದೊಂದು ಸುತ್ತಿನ ಫಲಿತಾಂಶ ಬಂದ ನಂತರ ವೀಕ್ಷಕರ ಒಪ್ಪಿಗೆ ಪಡೆದು, ಚುನಾವಣಾ ಆಯೋಗದ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗುವುದು ಎಂದು ವಿವರಿಸಿದರು.

ಪೊಲೀಸ್ ಸರ್ಪಗಾವಲು

ಬಾಳಿಗಾ ಕಾಲೇಜ್ ಸುತ್ತ ಬಿಗಿ ಪೊಲೀಸ್ ಭದ್ರತೆ ಅಳವಡಿಸಲಾಗಿದೆ. 4 ಡಿಎಸ್‌ಪಿ, 15 ಇನ್ಸ್ಪೆಕ್ಟರ್, 40 ಪಿಎಸ್‌ಐ, 54 ಎಎಸ್‌ಐ, 104 ಎಚ್‌ಸಿ, 170 ಪಿಸಿ, 38 ಮಹಿಳಾ ಪಿಸಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 5 ಡಿಎಆರ್ ತುಕಡಿ, 2 ಕೆಎಸ್‌ಆರ್‌ಪಿ, 1 ಸಿಆರ್‌ಪಿಎಫ್ ತುಕಡಿ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

    • *ಹೊರ ದೇಶ, ರಾಜ್ಯದಲ್ಲಿ ಸರ್ಕಾರಿ ಕರ್ತವ್ಯದಲ್ಲಿರುವ ನೌಕರರಿಗೆ ನೀಡುವ ಇಲೆಕ್ಟಿçಕಲಿ ಟ್ರಾನ್ಸ್ಮೀಟೆಡ್ ಪೋಸ್ಟಲ್ ಬೆಲೆಟ್ ಸಿಸ್ಟಂ (ಇಟಿಪಿಬಿಎಸ್)ಮತ ವ್ಯವಸ್ಥೆಯಡಿ ಕ್ಷೇತ್ರದಲ್ಲಿ ಇದುವರೆಗೆ 2306 ಮತಗಳು ಬಂದಿವೆ. ಮತ ಎಣಿಕೆಯ ದಿನ ಬೆಳಗ್ಗೆ 8 ಗಂಟೆಯವರೆಗೆ ಬಂದ ಇಟಿಪಿಬಿಎಸ್ ಮತಗಳನ್ನು ಎಣಿಕೆಗೆ ಪರಿಗಣಿಸಲಾಗುವುದು.
    • *85 ವರ್ಷ ಮೇಲ್ಪಟ್ಟ 2859 ಮತದಾರರು, 1924 ಅಂಗವಿಕಲ ಮತದಾರರು, ಮನೆಯಿಂದಲೇ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿದ್ದಾರೆ.
    • *ಹೆಸ್ಕಾಂ, ಕೆಎಸ್‌ಆರ್‌ಟಿಸಿ ಸೇರಿ 253 ಅಗತ್ಯ ಸೇವೆಗಳ ಸಿಬ್ಬಂದಿ, 1164 ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿದ್ದಾರೆ.
    • *ಎಲ್ಲರ ಮತಗಳ ಎಣಿಕೆಗೆ ಹೆಚ್ಚು ಕಾಲ ಬೇಕಿದ್ದು, ಪ್ರತ್ಯೇಕ ಕೋಣೆ ಮಾಡಿ 20 ಟೇಬಲ್ ಅಳವಡಿಸಲಾಗಿದೆ. ಇವಿಎಂ ಮತಗಳ ಎಣಿಕೆಗ ಮುಗಿಯುವ ಹೊತ್ತಿಗೆ. ಈ ಎಲ್ಲ ಪೋಸ್ಟಲ್ ಬ್ಯಾಲೆಟ್ ಎಣಿಕೆಯೂ ಮುಗಿಯುವಂತೆ ನೋಡಿಕೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net