ಇಂದು ಮತ ಎಣಿಕೆ, ಯಾರಾಗ್ತಾರೆ ಉತ್ತರ ಕನ್ನಡದ ಎಂಪಿ..?

ounting-preparation.
Published on

ಕಾರವಾರ: ಕಳೆದ ಎರಡು ತಿಂಗಳುಗಳಿAದ ನಡೆದ ರಾಜಕೀಯ ವಿದ್ಯಮಾನಗಳಿಗೆ ಜೂನ್ 4ರಂದು ತೆರೆ ಬೀಳಲಿದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ 12.56 ಲಕ್ಷ ಮತದಾರರು ಬರೆದ 13 ಮಂದಿರ ಭವಿಷ್ಯ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಅನಾವರಣವಾಗಲಿದೆ.
ಕುಮಟಾದ ಎ.ವಿ.ಬಾಳಿಗಾ ಕಾಲೇಜ್‌ನಲ್ಲಿ ಮತ ಎಣಿಕೆಗೆ ಸರ್ವ ಸಿದ್ಧತೆ ನಡೆಸಲಾಗಿದೆ. ಎಣಿಕೆ ಕಾರ್ಯಕ್ಕಾಗಿ ಒಟ್ಟು 562 ಅಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಸೋಮವಾರ ಕೊನೆಯ ಹಂತದ ರ‍್ಯಾಂಡಮೈಜೇಶನ್ ಮಾಡಿ ಅಽಕಾರಿ, ಸಿಬ್ಬಂದಿಗೆ ಜವಾಬ್ದಾರಿ ವಹಿಸಲಾಯಿತು.

ಪೊಲೀಸ್ ಸರ್ಪಗಾವಲು:

ಮತ ಎಣಿಕೆ ಕಾರ್ಯಕ್ಕಾಗಿ ಸಾಕಷ್ಟು ಭದ್ರತೆ ಒದಗಿಸಲಾಗಿದೆ. 4 ಡಿವೈಎಸ್ಪಿ, 15 ಸಿಪಿಐ ಗಳು, 40 ಪಿಎಸ್‌ಐ, 54 ಎ.ಎಸ್.ಐ, 104 ಹೆಡ್ ಕಾನ್ಸ್ಟೇಬಲ್, 170 ಪೊಲೀಸ್ ಕಾನ್ಸ್ಟೇಬಲ್, 38 ಮಹಿಳಾ ಕಾನ್ಸ್ಟೇಬಲ್, 5 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕೆ.ಎಸ್.ಆರ್.ಪಿ ಮತ್ತು ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ 1 ತುಕಡಿಗಳನ್ನು ನಿಯೋಜಿಸಲಾಗಿದೆ.

ಸಂಚಾರ ನಿಷೇಧ

ಎಣಿಕೆ ನಡೆಯಲಿರುವ ಕುಮಟಾದ ಡಾ.ಎ.ವಿ.ಬಳಿಗಾ ಕಾಲೇಜ್ ಮುಂಭಾಗದ ಕುಮಟಾ-ಹೆಗಡೆ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಜೂನ್ 4 ರಂದು ನಿಷೇಽಸಿ ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.
ಹೆಗಡೆ ಸರ್ಕಲ್‌ನಿಂದ ಹಳಕಾರ ಕ್ರಾಸವರೆಗೆ ಜೂನ್ 4 ರ ಬೆಳಗ್ಗೆ 6 ಗಂಟೆಯಿAದ ಮತ ಎಣಿಕೆ ಮುಕ್ತಾಯವಾಗುವವರೆಗೆ ನಿಷೇಧ ಇರಲಿದೆ. ಈ ಅವಯಲ್ಲಿ ವಿವೇಕನಗರ 4ನೇ ಕ್ರಾಸ ಮೂಲಕ, ವಿವೇಕನಗರ ಶಾಲೆಯ ಪಕ್ಕದ ಮಾರ್ಗವಾಗಿ ರಾಮಲಿಲಾ ಆಸ್ಪತ್ರೆ ಕ್ರಾಸ್ ಎನ್‌ಹೆಚ್-66 ಮುಖಾಂತರ ಕುಮಟಾ ಶಹರಕ್ಕೆ, ಹಳಕಾರ ಕ್ರಾಸ್‌ನಿಂದ ಹೆಗಡೆವರೆಗಿನ ಎಲ್ಲ ಸಾರ್ವಜನಿಕರು ಹಳಕಾರ ಕ್ರಾಸ್-ಚಿತ್ರಿಗಿ ಮಾರ್ಗವಾಗಿ ಶಹರಕ್ಕೆ ತಲುಪಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ.

13 ಅಭ್ಯರ್ಥಿಗಳು

ಕಾಂಗ್ರೆಸ್‌ನಿಂದ ಡಾ.ಅಂಜಲಿ ನಿಂಬಾಳ್ಕರ್, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್‌ಯುಸಿಐಸಿ ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಜ್ಯ ಸಮಿತಿಯ ವಿನಾಯಕ ಮಂಗೇಶ ನಾಯ್ಕ, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಕಣದಲ್ಲಿದ್ದರು.
12.56 ಲಕ್ಷ ಜನರಿಂದ ಹಕ್ಕು ಚಲಾವಣೆ
ಮೇ 7 ರಂದು ನಡೆದಿದ್ದ ಮತದಾನದಲ್ಲಿ 6,33,630 ಪುರುಷರು, 6,22,392 ಮಹಿಳೆಯರು ಹಾಗೂ 5 ಮಂದಿ ಇತರರು ಸೇರಿದಂತೆ ಒಟ್ಟು 12,56,027 ಮಂದಿ ( ಶೇ.76.53 ರಷ್ಟು ) ಜನ ತಮ್ಮ ಹಕ್ಕು ಚಲಾಯಿಸಿದ್ದರು.

ಭವಿಷ್ಯ ನಿರ್ಧರಿಸಲಿರುವ ಚುನಾವಣೆ

8 ಕ್ಷೇತ್ರದಲ್ಲಿ ಐವರು ಶಾಸಕರು ಅದರಲ್ಲಿ ಮೂರು ಗೂಟದ ಕಾರುಗಳ ಅಧಿಕಾರ ಹೊಂದಿರುವವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಇದರಿಂದ ಆ ಪಕ್ಷಕ್ಕೆ ಲೋಕ ಸಮರ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಗೊಮ್ಮೆ ಲೋಕ ಸಮರ ಗೆಲ್ಲದೇ ಇದ್ದರೆ ಜಿಲ್ಲೆಯ ಉಸ್ತುವಾರಿ ಬದಲಾಗಲಿದೆ ಎಂಬ ಗುಲ್ಲು ಕೂಡ ಎಲ್ಲೆಡೆ ಎದ್ದಿದೆ.
2004 ರಿಂದ ನಿರಂತರವಾಗಿ ಗೆಲ್ಲುತ್ತ ಬಂದ ಬಿಜೆಪಿಗೆ ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ್ ಇಬ್ಬರೂ ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳು. ಅವರಿಬ್ಬರ ರಾಜಕೀಯ ಭವಿಷ್ಯವನ್ನೂ ಇದೇ ಚುನಾವಣೆ ನಿರ್ಧರಿಸಲಿದೆ.

ಹೀಗೆ ನಡೆಯಲಿದೆ ಎಣಿಕೆ:

  • *ಬೆಳಗ್ಗೆ 7 ಗಂಟೆಗೆ ಅಭ್ಯರ್ಥಿ/ಏಜೆಂಟರ ಸಮ್ಮುಖದಲ್ಲಿ ಅಂಚೆ ಮತದಾನದ ಕವರ್ ಇಟ್ಟಿರುವ ಕೊಠಡಿಯನ್ನು ತೆರೆಯಲಾಗುವುದು.
  • *7.30 ಕ್ಕೆ ಅಂಚೆ ಮತ ಎಣಿಕೆ 20 ಟೇಬಲ್‌ಗಳಲ್ಲಿ ಪ್ರಾರಂಭ. ಇಟಿಪಿಬಿಎಸ್, ಹಿರಿಯ ನಾಗರಿಕರು, ಅಂಗವಿಕಲರು ಮನೆಯಿಂದಲೇ ಮತದಾನ ಮಾಡಿದವರು, ಅಗತ್ಯ ಸೇವಾ ಸಿಬ್ಬಂದಿ ಹಾಗೂ ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿಯ ಮತಗಳ ಎಣಿಕೆ.
  • *8 ಗಂಟೆಗೆ ಏಕ ಕಾಲದಲ್ಲಿ 8 ವಿಧಾನಸಭಾ ಕ್ಷೇತ್ರಗಳ ಇವಿಎಂ ಇರಿಸಿದ ಸ್ಟಾçಂಗ್ ರೂಂ. ಓಪನ್, ಎಣಿಕೆ ಪ್ರಾರಂಭ.
  • *ಪ್ರತಿ ವಿಧಾನಸಭಾ ಕ್ಷೇತ್ರ ಕೋಣೆಯಲ್ಲಿ 14 ಟೇಬಲ್ ಅಳವಡಿಕೆ, ಎಲ್ಲ ಕ್ಷೇತ್ರಗಳ ಒಂದು ಸುತ್ತಿನ ಎಣಿಕೆ ಆದ ನಂತರ ಅವುಗಳನ್ನು ಒಟ್ಟುಗೂಡಿಸಿ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್.
  • *ಒಟ್ಟು 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಹಳಿಯಾಳ, ಕುಮಟಾ ಕ್ಷೇತ್ರಗಳ ಎಣಿಕೆ 16 ಸುತ್ತುಗಳಲ್ಲೇ ಮುಕ್ತಾಯ.
  • *ಖಾನಾಪುರ ಕ್ಷೇತ್ರದಲ್ಲಿ ಮಾತ್ರ 23 ಸುತ್ತುಗಳಲ್ಲಿ ಮತ ಎಣಿಕೆ. ಯಲ್ಲಾಪುರ, ಕಿತ್ತೂರು,17, ಭಟ್ಕಳ 18,ಕಾರವಾರ,ಶಿರಸಿ 19 ಸುತ್ತುಗಳಲ್ಲಿ ಮತ ಎಣಿಕೆ ಮುಕ್ತಾಯ.

ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ಮತ ಎಣಿಕೆ ನಡೆಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಒಬ್ಸರ್ವರ್ ಹೊರತು ಬೇರೆ ಯಾರಿಗೂ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗಂಗೂಬಾಯಿ ಮಾನಕರ್‌ ಜಿಲ್ಲಾಧಿಕಾರಿ ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net