ಯದುವೀರ್ ಅವರನ್ನು ಅಭ್ಯರ್ಥಿಯಾಗಿ ಎದುರಿಸುತ್ತೇವೆ : ತನ್ವೀರ್ ಸೇಠ್

yaduveer
Published on

ದೇಶದಲ್ಲಿ ಪ್ರಸ್ತುತ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೊರತು ರಾಜಪ್ರಭುತ್ವ ವ್ಯವಸ್ಥೆಯಲ್ಲ. ಹಾಗಾಗಿ ಮೈಸೂರು ರಾಜಮ ನೆತನದ ಯದುವೀರ್ ಅವರನ್ನು ನಾವು ಪ್ರಸ್ತುತ ಬಿಜೆಪಿ ಅಭ್ಯರ್ಥಿಯಾಗಿ ಮಾತ್ರ ನೋಡುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಮೈಸೂರು ರಾಜಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ಯದುವೀರ್ ಚುನಾವಣಾ ರಾಜಕಾರಣಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಅವರನ್ನು ಅಭ್ಯರ್ಥಿಯಾಗಿ ಎದುರಿಸುವುದು ಅನಿವಾರ್ಯ. ಹಾಗಾಗಿ ಅವರನ್ನು ನಾವು ಪ್ರತಿಸ್ಪರ್ಧಿಯಾಗಿ ನೋಡುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಹೊಂದಿರುವ ಕಾಂಗ್ರೆಸ್‌ನ ಸಮಾನ್ಯ ಕಾರ್ಯಕರ್ತ ಎಂ. ಲಕ್ಷ್ಮಣ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜನರೊಂದಿಗೆ ಒಡನಾಟ ಹೊಂದಿರುವ ಅವರಿಗೆ ಜನರ ಸಂಕಷ್ಟಗಳ ಅರಿವು ಇದೆ. ಹೀಗಾಗಿ ಜನರು ಅವರನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net