ಲೋಕಸಭೆ ಅಖಾಡಕ್ಕೆ ಕೈ-ಕಮಲ ಪಡೆಗಳಲ್ಲಿ ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ

31GDG01C
Published on

ಶಿವಾನಂದ ಹಿರೇಮಠ ಗದಗ
ವಿಧಾನಸಭೆ ಚುನಾವಣೆ ಬೆನ್ನಲ್ಲೇ 2024ರ ಲೋಕಸಭೆ ಚುನಾವಣೆ ಅಖಾಡಕ್ಕೆ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿವೆ. ಕಣದಲ್ಲಿ ಸ್ಪಧಿರ್ಗಳಾಗಲು ಕೈ-ಕಮಲ ನಾಯಕರಲ್ಲೂ ಪೈಪೋಟಿ ಶುರುವಾಗಿದೆ. ಈ ಬಾರಿ ಹೊಸ ಸ್ಪಧಿರ್ಗಳು ಆಕಾಂಗಳಾಗಿರುವುದು ವಿಶೇಷ.
ಬಿಜೆಪಿ ಸ್ಪಧಿರ್ಗಳು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನಲ್ಲಿದ್ದರೇ, ವಿಧಾನಸಭೆ ಗೆಲುವಿನ ವರ್ಚಸ್ಸಿನಲ್ಲಿ ಕಾಂಗ್ರೆಸ್​ ಸ್ಪಧಿರ್ಗಳು ಕಣದಲ್ಲಿ ದಾಂಗುಡಿ ಇಡಲು ಸಿದ್ದರಾಗಿದ್ದಾರೆ. ಕಣದಲ್ಲಿ ಹಿರಿಯ ಮತ್ತು ಕಿರಿಯ ರಾಜಕಾರಣಿಗಳು, ಹೊಸ ಸ್ಪಧಿರ್ಗಳ ಹೆಸರು ಕೇಳಿ ಬರುತ್ತಿದ್ದು, ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್​ ಪಡೆಯವುದು ಲೋಕಸಭಾ ಗೆಲುವಿನಷ್ಟೇ ಆಕಾಂಗಳಿಗೆ ಸವಾಲಾಗಿ ಪರಿಣಮಿಸಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಈಗಾಗಲೇ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಸದ್ದಿಲ್ಲದೇ ಹೈಕಮಾಂಡ್​ ಮಟ್ಟದಲ್ಲಿ ಟಿಕೆಟ್​ಗಾಗಿ ಮನವಿ ಸಲ್ಲಿಸಿದ್ದಾರೆ.
ಗದಗ ಜಿಲ್ಲೆಯ 3 ವಿಧಾನಸಭಾ ಮತ್ತು ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ಒಳನ್ನೊಳಗೊಂಡು ಒಟ್ಟು 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹೊಂದಿರುವ ಗದಗ&ಹಾವೇರಿ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಇನ್ನೂಳಿದ ಗದಗ, ರೋಣ, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್​ ಮತ್ತು ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದೆ. ವಿಧಾನಸಭಾ ಹಾಗೂ ಲೋಕಸಭಾ ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖ ಮತಬ್ಯಾಂಕ್​ಗಳಾದ ವೀರಶೈವ ಲಿಂಗಾಯತ ಮತ್ತು ಕುರುಬ ಸಮುದಾಯದಗಳ ಮತದಾನ ಭಿನ್ನ ಆಗಿರುವುದರಿಂದ ಗೆಲವು ಸೋಲುವು ಊಹಿಸುವುದು ಕಷ್ಟವಾಗಿದೆ.
ಗದಗ&ಹಾವೇರಿ ಲೋಕಸಭಾ ಕ್ಷೇತ್ರವೂ ಈಗ ಹೊಸಬರಿಗೆ ಅವಕಾಶ ಕಲ್ಪಿಸಬಹುದಾದ ಕ್ಷೇತ್ರಗಳಲ್ಲಿ ಒಂದು. ಬಿಜೆಪಿ ಸಂಸದ ಶಿವಕುಮಾರ ಉದಾಸಿ ಲೋಕಸಭೆ ಚುನಾವಣಾ ಅಖಾಡದಿಂದ ಹಿಂದೆ ಸರಿದ ಹಿನ್ನೆಲೆ ಬಿಜೆಪಿಯಲ್ಲಿ ಹೊಸ ಆಕಾಂಗಳ ದಂಡೇ ಹುಟ್ಟಿಕೊಂಡಿದೆ. ಕಾಂಗ್ರೆಸ್ಸಿನ ಮಾಜಿ ಶಾಸಕ ಡಿ.ಆರ್​. ಪಾಟೀಲ ಮತ್ತು ವಿಧಾನ ಪರಿಷತ್​ ಸದಸ್ಯ ಸಲೀಂ ಅಹಮ್ಮದ್​ ಹೆಸರು ಈ ಮೊದಲು ಹರಿದಾಡುತ್ತಿತ್ತು. ಚುನಾವಣಾ ರಾಜಕಾರಣದಿಂದ ಡಿ.ಆರ್​. ಪಾಟೀಲ ನಿವೃತ್ತಿ ಮತ್ತು ಸಲೀಂ ಅಹಮ್ಮದ್​ ಕಾಂಗ್ರೆಸ್ಸಿನ್ನಿಂದ ವಿಧಾನ ಪರಿಷತ್​ ಸದಸ್ಯರಾಗಿರುವ ಹಿನ್ನೆಲೆ ಕಾಂಗ್ರೆಸ್​ ಪಕ್ಷ ಹೊಸಬರ ಹುಡುಕಾಟದಲ್ಲಿದೆ ಎನ್ನಲಾಗಿದೆ.

ಹೈಕೋರ್ಟ್​ ವಕೀಲರಾಗಿರುವ ಶರಣು ಅಂಗಡಿ ಮೂಲತಃ ಹಾವೇರಿ ಜಿಲ್ಲೆಯವರು. ಕಳೆದ ಎರಡು ದಶಕಗಳಿಂದ ಎಬಿವಿಪಿ, ವಿಶ್ವ ಹಿಂದು ಪರಿಷತ್​ನಲ್ಲಿ ಹಲವು ಹದ್ದೆಗಳನ್ನು ನಿಭಾಯಿಸಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ನಿದೇರ್ಶಕರಾಗಿ ಸೇವೆಸಲ್ಲಿಸಿದ್ದಾರೆ. ಈ ಬಾರಿ ಪ್ರಬಲ ಆಕಾಂಗಳ ಪಟ್ಟಿಯಲ್ಲಿದ್ದಾರೆ. ವಕೀಲ ಸೇವೆ ಸಲ್ಲಿಸಿರುವ ಶೇಖರ್​ ಸಜ್ಜನ ಇವರು ವೀರಶೈವ ಲಿಂಗಾಯತ ಸಮುದಾಯದಕ್ಕೆ ಕೇಂದ್ರಪಟ್ಟಿಯಲ್ಲಿ ಓಬಿಸಿ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದಾರೆ. ಕಾಂಗ್ರೆಸ್​ ಹೊಸ ಆಕಾಂಗಳು ಆನಂದಸ್ವಾಮಿ ಗಡ್ಡದೇವರಮಠ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ಎಸ್​. ಗಡ್ಡದೇವರಮಠ ಅವರ ಪುತ್ರ. ಬೆಳಗಾವಿಯಲ್ಲಿ ಸ್ವಂತ ಉದ್ಯೋಗವಿದೆ. ಹಾನಗಲ್​ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜೆಪಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅನಿಲ ಮೆಣಸಿನಕಾಯಿ, ಬಿ. ಸಿ. ಪಾಟೀಲ, ಕೆ.ಎಸ್​. ಈಶ್ವರಪ್ಪ ಪುತ್ರ ಕಾಂತೇಶ್​, ಕಾಂಗ್ರೆಸ್ಸಿನಲ್ಲಿ ಐಜಿ ಸನದಿ ಪುತ್ರ ಶಾಕೀರ್​ ಸನದಿ, ಮಾಜಿ ಸಂಸದ ಮಂಜುನಾಥ ಕೊಣ್ಣುರು ಸೇರಿದಂತೆ ಹಲವರ ಹೆಸರು ಸ್ಪರ್ಧೆಯಲ್ಲಿ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net