ಇಂದಿರಾ ಕ್ಯಾಂಟೀನ್ ಸದುಪಯೋಗ ಪಡಿಸಿಕೊಳ್ಳಿ

Untitled design (12)
Published on

ಹಗರಿಬೊಮ್ಮನಹಳ್ಳಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಂಸದ ಈ.ತುಕಾರಾಮ್ ಹಾಗೂ ಶಾಸಕ ಕೆ.ನೇಮಿರಾಜ್ ನಾಯ್ಕ ಗುರುವಾರ ಚಾಲನೆ ನೀಡಿದರು.

ಕ್ಯಾಂಟೀನ್ ಉದ್ಘಾಟನೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಉಪಹಾರ ನೀಡಲಾಯಿತು. ಇಂದಿರಾ ಕ್ಯಾಂಟೀನನ್ನು ಬಡವರು, ರೈತರು, ಕೂಲಿಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸದ ಕೋರಿದರು.

ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ಕಾಂಗ್ರೆಸ್ ಬ್ಯಾನರ್ ಅಳವಡಿಸಿದ್ದಕ್ಕೆ ಶಾಸಕ ಕೆ.ನೇಮಿರಾಜ್ ನಾಯ್ಕ ಸಿಡಿಮಿಡಿಗೊಂಡರು. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಅವರನ್ನು ತರಾಟೆಗೆ ತೆಗೆದುಕೊಂಡು ಬ್ಯಾನರ್ ತೆರವುಗೊಳಿಸಿ ಸೂಚಿಸಿದರು. ಸಂಸದ ಈ.ತುಕಾರಾಮ್ ಮಾತನಾಡಿ, ಶಿಷ್ಟಾಚಾರದಂತೆ ಈ ಸ್ಥಳದಲ್ಲಿ ಬ್ಯಾನರ್ ಹಾಕುವಂತಿಲ್ಲ, ತೆರವುಗೊಳಿಸಿ ಎಂದರು. ಬಳಿಕ ಪುರಸಭೆ ಸಿಬ್ಬಂದಿ ಬ್ಯಾನರ್ ತೆರವುಗೊಳಿಸಿದರು. ತಹಸೀಲ್ದಾರ್ ಆರ್.ಕವಿತಾ, ಪುರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net