ಸಂಸದ ದೇವೆಂದ್ರಪ್ಪರ ಜತೆ ವೇದಿಕೆ ಹಂಚಿಕೊಳ್ಳಲ್ಲ ಎಂದ ಶಾಸಕ ಭೀಮಾನಾಯ್ಕ

290220 HB Halli Bhoomi Pooja
Published on

ಹಗರಿಬೊಮ್ಮನಹಳ್ಳಿ: ಸಂಸದ ವೈ.ದೇವೆಂದ್ರಪ್ಪ ಮಾಲವಿ ಜಲಾಶಯ ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದು ಬೇಸರದ ಸಂಗತಿ. ಹೀಗಾಗಿ ಅವರ ಜತೆ ಎಂದಿಗೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

ಪಟ್ಟಣದ ಅಗ್ನಿಶಾಮಕಠಾಣೆ ಬಳಿ 10 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿ ಸರ್ಕಾರದಿಂದ ಬಹುತೇಕ ಜನಪರ ಯೋಜನೆಗಳಿಗೆ ಅನುದಾನ ತಂದಿದ್ದೇನೆ. ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆ ಮೂರು ದಶಕಗಳ ಬೇಡಿಕೆ. ಇಂತಹ ಯೋಜನೆಗೆ ಸಂಸದ ದೇವೆಂದ್ರಪ್ಪ ಗುತ್ತಿಗೆದಾರರಿಗೆ ಧಮ್ಕಿ ಹಾಕಿ ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವುದು ಖಂಡನೀಯ. ಇದಕ್ಕಾಗಿ ಕ್ಷೇತ್ರದ ಜನರನ್ನು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ನಂದಿಪುರದ ಮಹೇಶ್ವರ ಸ್ವಾಮೀಜಿ, ಕೊಟ್ಟೂರಿನ ಚಾನುಕೋಟಿ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ತಹಸೀಲ್ದಾರ್ ಆಶಪ್ಪ ಪೂಜಾರ, ಜಿಪಂ ಸದಸ್ಯರಾದ ಶ್ಯಾನುಭೋಗರ ಗುರುಸಿದ್ದಪ್ಪ, ಎಂಎಂಜೆ ಹರ್ಷವರ್ಧನ, ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿದರು. ತಾಪಂ ಅಧ್ಯಕ್ಷೆ ಕೆ.ನಾಗಮ್ಮ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಟುಗನಹಳ್ಳಿ ಕೊಟ್ರೇಶ, ಬುಡ್ಡಿ ಬಸವರಾಜ, ತಾಪಂ ಇಒ ಸಿದ್ದೇಶ್ ಪೂಜಾರ್, ಪಿಡಬ್ಲುೃಡಿ ಎಇಇ ಪ್ರಭಾಕರ ಶೆಟ್ರು, ಟಿಎಚ್‌ಒ ಡಾ.ಸುಲೋಚನಾ, ತಾಪಂ ಸದಸ್ಯರಾದ ಪಾಂಡುನಾಯ್ಕ, ಎಂ.ಪ್ರಭಾಕರ, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಉಮಾಪತಿ, ಕೇಶವರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net