ಮುಡಿಪಿಗೆ ಸಂಸದ ಚೌಟ ಭೇಟಿ

Ull_Chouta-visit
Published on

ಉಳ್ಳಾಲ: ಸಂಸದರಾಗಿ ಚುನಾಯಿತರಾದ ಬಳಿಕ ಪ್ರಥಮ ಬಾರಿಗೆ ಶನಿವಾರ ಮುಡಿಪುಗೆ ಆಗಮಿಸಿದ ಕ್ಯಾ.ಬ್ರಿಜೇಶ್ ಚೌಟರನ್ನು ಮುಖಂಡರು, ಕಾರ್ಯಕರ್ತರು ಹಾಗೂ ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಗುಲಾಬಿ ಹೂವು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಕಾರ್ಯಕ್ರಮ ಪ್ರಯುಕ್ತ ಬ್ರಿಜೇಶ್ ಚೌಟ ಆಗಮಿಸಿದ್ದು, ಈ ಬಗ್ಗೆ ಮಾಹಿತಿ ಪಡೆದ ಮುಖಂಡರು ಮತ್ತು ಕಾರ್ಯಕರ್ತರು ಮುಡಿಪುವಿನ ಕಾಯೆರ್‌ಗೋಳಿ ಬಳಿ ಸೇರಿದ್ದರು.

ಈ ಸಂದರ್ಭ ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವ್ವತ್ತಬೈಲು, ಕೈರಂಗಳ ಶಾರದಾ ಗಣಪತಿ ವಿದ್ಯಾಸಂಸ್ಥೆಯ ಸಂಚಾಲಕ ಟಿ.ಜಿ.ರಾಜಾರಾಂ ಭಟ್, ಮುಖಂಡರಾದ ಸುರೇಶ್ ಆಳ್ವ ಸಾಂತ್ಯಗುತ್ತು, ಚಂದ್ರಶೇಖರ್ ಉಚ್ಚಿಲ್, ಯಶವಂತ ಅಮೀನ್, ಸುಮನಾ ಹರೀಶ್ ಶೆಟ್ಟಿ, ಯಶವಂತ್ ದೇರಾಜೆ, ಶಿವಾನಂದನ ಮೂಳೂರು, ನವೀನ್ ಪಾದಲ್ಪಾಡಿ, ಸುಬ್ರಹ್ಮಣ್ಯ ಭಟ್, ದಯಾನಂದ ತೊಕ್ಕೊಟ್ಟು, ಗೀತಾ ದಾಮೋದರ್ ಕುಂದರ್, ಸತ್ಯನಾರಾಯಣ ಭಟ್ ಎಡಂಬಳೆ, ರಾಜೇಶ್, ರಾಮಕೃಷ್ಣ ಪಟ್ಟೋರಿ ಸೇರಿದಂತೆ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net