ಜಿಹಾದಿ ಹೇಳಿಕೆ ನೀಡಿದವರನ್ನು ಬಂಧಿಸಲು ಕ್ಯಾ.ಚೌಟ ಆಗ್ರಹ

IMG-20240408-WA0344
Published on


ಮಂಗಳೂರು : ಹಿಂದು ಸಮಾಜವನ್ನು ಕೆಣಕುವ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಭಂಗ ತರಲು ಯತ್ನಿಸಿದ ಬಂಟ್ವಾಳ ಮಾಜಿ ಪುರಸಭೆಯ ಅಧ್ಯಕ್ಷ ಹಾಗೂ ಬೆಂಬಲಿಗರನ್ನು ತಕ್ಷಣ ಬಂಧಿಸಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.
ಬಿ.ಸಿ.ರೋಡ್‌ನಲ್ಲಿ ಕೋಮು ಸಂಘರ್ಷ ಸೃಷ್ಟಿಸುವುದಕ್ಕೆ ಕಾಂಗ್ರೆಸ್ ಯತ್ನಿಸಿದ್ದು ಕಂಡನೀಯ. ಜಿಹಾದಿ ರೀತಿಯ ಹೇಳಿಕೆ ನೀಡುವವರ ವಿರುದ್ಧ ಕೇವಲ ಎಫ್‌ಐಆರ್ ದಾಖಲಿಸಿದರೆ ಸಾಲದು. ವಿಷಬೀಜ ಬಿತ್ತುವ ಇಂಥಹ ಮನಸ್ಥಿತಿಯವರನ್ನು ಮುಲಾಜಿಲ್ಲದೆ ಜೈಲಿಗೆ ಅಟ್ಟಬೇಕು. ಇದರ ಹಿಂದಿರುವ ದುಷ್ಟಕೂಟದ ಬಗ್ಗೆಯೂ ತನಿಖೆ ನಡೆಸಿ ಅಂಥವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಹೇಳಿದ್ದಾರೆ.
ಬಿ.ಸಿ.ರೋಡ್, ಬಂಟ್ವಾಳ, ಮೇಲ್ಕಾರ್, ಶಾಂತಿಯಂಗಡಿ ಸುತ್ತ ಮುತ್ತಲಿನ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿದೆ. ಈ ರೀತಿಯ ಅಕ್ರಮ ಚಟುವಟಿಕೆಗಳೇ ಇಂಥಹ ಸಮಾಜಘಾತುಕರಿಗೆ ಅಶಾಂತಿ ಸೃಷ್ಟಿಸುವುದಕ್ಕೆ ಶಕ್ತಿ ನೀಡುತ್ತಿದೆ. ಇಲ್ಲಿನ ಮರುಳು ದಂಧೆಗೆ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಕೂಡಲೇ ಕಡಿವಾಣ ಹಾಕುವ ಜತೆಗೆ ಕಠಿಣ ಕ್ರಮ ಜರುಗಿಸಬೇಕೆಂದು ಕ್ಯಾ. ಚೌಟ ಆಗ್ರಹಿಸಿದ್ದಾರೆ.
......................................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net