

ದಾವಣಗೆರೆ: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ವಿಜಯ ಯಾತ್ರೆ ಅಂಗವಾಗಿ ಸೋಮವಾರ ದಾವಣಗೆರೆಗೆ ಬಂದ ನಟ ರಕ್ಷಿತ್ ಶೆಟ್ಟಿ, ಅಭಿಮಾನಿಗಳು, ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು.
ನಗರದ ಮೂವಿ ಟೈಮ್‌ನಲ್ಲಿ ಮಧ್ಯಾಹ್ನ 12ಕ್ಕೆ, ಗೀತಾಂಜಲಿ ಚಿತ್ರಮಂದಿರದಲ್ಲಿ 1 ಗಂಟೆಗೆ ಭೇಟಿ ನೀಡಿದ ರಕ್ಷಿತ್ ಜತೆಯಲ್ಲಿ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು.
ರಾಜ್ಯಾದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈಗಾಗಲೇ ಮಂಡ್ಯ, ಮೈಸೂರು, ಹಾಸನ, ಉಡುಪಿ, ಮಣಿಪಾಲ್, ಕುಂದಾಪುರ, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಯಾತ್ರೆ ಯಶಸ್ವಿಯಾಗಿ ನಡೆದಿದೆ.