ವಿಶೇಷ ರೈಲುಗಳ ಸಂಚಾರ

Train New
Published on

ಹುಬ್ಬಳ್ಳಿ : ಆಗಷ್ಟ್​ನಲ್ಲಿ ಬರುವ ಸಾಲು ರಜೆಗಳ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ - ಎಸ್​ಎಂವಿಟಿ ಬೆಂಗಳೂರು ಮತ್ತು ಎಸ್​ಎಂವಿಟಿ ಬೆಂಗಳೂರು- ಕಲಬುರ್ಗಿ ಮಧ್ಯೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

ಆ. 14ರಂದು ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಗ್ಗೆ 11 ಗಂಟೆಗೆ ಹೊರಡುವ ರೈಲು, ರಾತ್ರಿ 8 ಗಂಟೆಗೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣ ತಲುಪುತ್ತದೆ.

ಆ. 14, 16 ಮತ್ತು 17ರಂದು ಎಸ್​ಎಂವಿಟಿ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 9.15ಕ್ಕೆ ಹೊರಡುವ ರೈಲು, ರಾತ್ರಿ 7.45ಕ್ಕೆ ಕಲಬುರ್ಗಿ ತಲುಪುತ್ತದೆ.

ಮರಳಿ ಆ. 15, 17 ಮತ್ತು 18ರಂದು ಬೆಳಗ್ಗೆ 9.30ಕ್ಕೆ ಕಲಬುರ್ಗಿಯಿಂದ ಹೊರಡುವ ರೈಲು, ರಾತ್ರಿ 8 ಗಂಟೆಗೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣ ತಲುಪುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net