

ಹುಬ್ಬಳ್ಳಿ : ಎಸ್ಎಸ್ಎಸ್ ಹುಬ್ಬಳ್ಳಿ-ಬನಾರಸ&ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ಮಧ್ಯೆ 6 ಟ್ರಿಪ್, ಎಸ್ಎಸ್ಎಸ್ ಹುಬ್ಬಳ್ಳಿ-ಮುಜಾಫರಪುರ -ಎಸ್ಎಸ್ಎಸ್- ಹುಬ್ಬಳ್ಳಿ ನಿಲ್ದಾಣಗಳ ಮಧ್ಯೆ 8 ಟ್ರಿಪ್ ಹಾಗೂ ಮೈಸೂರು-ಭಗತ್ ಕಿ-ಕೋತಿ-ಮೈಸೂರು ಬೇಸಿಗೆಯ ಎಕ್ಸ್ಪ್ರೆಸ್ ವಿಶೇಷ ರೈಲು 8 ಟ್ರಿಪ್ ಸಂಚಾರ ಪ್ರಾರಂಭಿಸಲಾಗುತ್ತಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಏ. 5, 12, 19, 26, ಮೇ 3, 10ರ ಶನಿವಾರದಂದು ಬೆಳಗ್ಗೆ 9 ಗಂಟೆಗೆ ಹೊರಟು, ಸೋಮವಾರ ಮಧ್ಯಾಹ್ನ 1.15 ಕ್ಕೆ ಉತ್ತರ ಪ್ರದೇಶದ ಬನಾರಸ ತಲುಪಲಿದೆ.
ಬನಾರಸನಿಂದ ಏ. 8, 15, 22, 29, ಮೇ 6, 13ರ ಮಂಗಳವಾರದಂದು ಬೆಳಗ್ಗೆ 9 ಗಂಟೆಗೆ ಹೊರಟು, ಗುರುವಾರ ಬೆಳಗ್ಗೆ 10 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಕಡೂರು, ಅರಸೀಕೆರೆ, ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ಬೇಗಂಪೇಟೆ, ಸಿಕಂದರಾಬಾದ್, ಕಾಜಿಪೇಟ್ ಹಾಗೂ ಮತ್ತಿತರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಏ. 7, 14, 21,28, ಮೇ 5,12,19,26ರ ಸೋಮವಾರದಂದು ಸಂಜೆ 5:20ಕ್ಕೆ ಹೊರಡುವ ರೈಲು, ಬುಧವಾರ ಮಧ್ಯಾಹ್ನ 12.30ಕ್ಕೆ ಮುಜಾಫರಪುರ ನಿಲ್ದಾಣ ತಲುಪಲಿದೆ.
ಮುಜಾರಪುರ ನಿಲ್ದಾಣದಿಂದ ಏ. 10, 17, 24, ಮೇ 1, 8, 15, 22, 29ರ ಗುರುವಾರ ಮಧ್ಯಾಹ್ನ 2:15 ಕ್ಕೆ ಹೊರಡುವ ರೈಲು, ಶನಿವಾರ ಬೆಳಗ್ಗೆ 10.30 ಕ್ಕೆ ಎಸ್ಎಸ್ಎಸ್ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆೆ, ಅಹ್ಮದ್ನಗರ, ಕೋಪರಗಾಂವ, ದಾನಾಪುರ, ಪಾಟ್ಲಿಪುತ್ರ, ಹಾಜಿಪುರ ಮತ್ತಿತರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಮೈಸೂರಿನಿಂದ ಏ. 7, 14, 21, 28, ಮೇ 5, 12, 19, 26ರ ಸೋಮವಾರ ರಾತ್ರಿ 9:20 ಕ್ಕೆ ಹೊರಡುವ ರೈಲು, ಬುಧವಾರ ಸಂಜೆ 5 ಗಂಟೆಗೆ ಭಗತ್ ಕಿ ಕೋತಿ ನಿಲ್ದಾಣ ತಲುಪಲಿದೆ.
ಭಗತ್ ಕಿ ಕೋತಿ ನಿಲ್ದಾಣದಿಂದ ಏ. 11, 18, 25 ಮೇ 2, 9, 16, 23, 30ರ ಶುಕ್ರವಾರ ರಾತ್ರಿ 10.30ಕ್ಕೆ ಹೊರಡುವ ರೈಲು, ಭಾನುವಾರ ಸಂಜೆ 4.40 ಕ್ಕೆ ಮೈಸೂರು ತಲುಪಲಿದೆ.
ರೈಲು ಕೆಎಸ್ಆರ್ ಬೆಂಗಳೂರು, ದಾವಣಗೆರೆ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಪುಣೆ ಮತ್ತಿತರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.