ಆರ್‌ಎಸ್‌ಎಸ್ ಸ್ವಯಂಸೇವಕರ ಪಥಸಂಚಲನ

12-pnp 1
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಸ್ಥಾಪನಾ ದಿನದ ಅಂಗವಾಗಿ ಸ್ವಯಂ ಸೇವಕರು ಪಾಂಡವಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ರಾಧಕೃಷ್ಣ, ಎಲ್.ಅಶೋಕ್, ವೇಣು, ನವೀನ್ ಇತರರು ಇದ್ದರು.
Published on

ಪಾಂಡವಪುರ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ 100ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸ್ವಯಂ ಸೇವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ಪಥಸಂಚಲನ ನಡೆಸಿದರು.


ಪಟ್ಟಣದ ಭೋವಿ ಕಾಲನಿಯಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಭಗವಧ್ವಜಕ್ಕೆ ವಂದನೆ ಸಲ್ಲಿಸಿ ಹೊರಟ ಪಥಸಂಚಲನ ಸ್ವಯಂ ಸೇವಕರು ಹಿರೋಡೆ ಬೀದಿ, ಹಳೇ ನಾಗಮಂಗಲ ರಸ್ತೆ, ಪೊಲೀಸ್ ಠಾಣೆ ರಸ್ತೆ, ಪೇಟೆ ಬೀದಿ, ಹಳೇ ಬಸ್ ನಿಲ್ದಾಣ, ಬ್ಯಾಂಕ್ ಬರೋಡ ರಸ್ತೆ, ಡಾ.ರಾಜ್‌ಕುಮಾರ್ ವೃತ್ತದ ಮೂಲಕ ವಾಪಸ್ ಕಚೇರಿ ಆವರಣ ತಲುಪಿದರು. ಈ ವೇಳೆ ದಾರಿಯುದ್ದಕ್ಕೂ ದೇಶ ಭಕ್ತಿ ಗೀತೆಗಳನ್ನು ಹಾಡಲಾಯಿತು.


ಸಬ್ ಇನ್‌ಸ್ಪೆಕ್ಟರ್ ಆರ್.ಬಿ.ಉಮೇಶ್ ನೇತೃತ್ವದಲ್ಲಿ ಆಯಾ ಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು. ಸಂಘದ ಪ್ರಮುಖರಾದ ರಾಧಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ತಾಲೂಕು ಅಧ್ಯಕ್ಷ ಧನಂಜಯ, ಪುರಸಭೆ ಸದಸ್ಯ ಎಲ್.ಅಶೋಕ್, ಮಾಜಿ ಸದಸ್ಯ ವೇಣು, ಚಿಕ್ಕಮರಳಿ ನವೀನ್, ಹಿಂದು ಜಾಗರಣ ವೇದಿಕೆಯ ಮಾರ್ಕಂಡಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net