ನಿರ್ದಿಷ್ಟ ಗುರಿಯೊಂದಿಗೆ ಮುನ್ನುಗ್ಗಿ

Move forward with a specific goal
ವಿಜಯಪುರದ ಶಾಂತವೀರ ನಗರದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸ 188ನೇ ಜನ್ಮದಿನದ ಹಿನ್ನೆಲೆ ಪ್ರತಿಭಾ ಪುರಸ್ಕಾರ ನಡೆಯಿತು. ಸಮೂಹ ಸಂಪನ್ಮೂಲ ಅಧಿಕಾರಿ ವಿರೇಶ ಮಾಶೆಟ್ಟಿ, ಪ್ರಾಚಾರ್ಯೆ ನೀಲಮ್ಮ ಪೂಜಾರಿ, ನಿರ್ದೇಶಕ ಜಿ.ಡಿ. ಚನ್ನಾಳ ಇತರರಿದ್ದರು.
Published on

ವಿಜಯಪುರ: ಇಲ್ಲಿನ ಶಾಂತವೀರ ನಗರದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮಂಗಳವಾರ ಭಗವಾನ ಶ್ರೀ ರಾಮಕೃಷ್ಣ ಪರಮಹಂಸ 188ನೇ ಜನ್ಮದಿನದ ಹಿನ್ನೆಲೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೆಬಿಎಸ್ ನಂ. 6ರ ಸಮೂಹ ಸಂಪನ್ಮೂಲ ಅಧಿಕಾರಿ ವಿರೇಶ ಮಾಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಹಿಂದೆ ಗುರು ಮುಂದಿ ಗುರಿ ಹೊಂದಿದಾಗ ಮಾತ್ರ ಮಕ್ಕಳು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ವಿದ್ಯಾರ್ಥಿಗಳು ಧೈರ್ಯ, ತಾಳ್ಮೆ, ಸಹನೆ ಅಳವಡಿಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.

ಪ್ರಾಚಾರ್ಯೆ ನೀಲಮ್ಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಂತರ ಮಕ್ಕಳಿಂದ ಗಾಯನ ಮತ್ತು ಭಾಷಣ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದವು.

ನಿರ್ದೇಶಕ ಜಿ.ಡಿ. ಚನ್ನಾಳ, ಶಿಕ್ಷಣ ಸಂಯೋಜಕ ಶಿವಲೀಲಾ ಪೂಜಾರಿ, ಮುಖ್ಯ ಶಿಕ್ಷಕಿ ಹರಜೊತ ಕೌರ ಜೊಗಿ, ಪ್ರಾಚಾರ್ಯ ಮಹೇಶ್ವರಪ್ಪ ಡಿ., ಆಡಳಿತ ಸಿಬ್ಬಂದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net